ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಪಾದಂಗಳವರ ನಿಧನಕ್ಕೆ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ

BI ಬಿಜಾಪುರ : ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಪಾದಂಗಳವರ ನಿಧನಕ್ಕೆ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ಜನಮುಖಿ ಸ್ವಾಮಿಜಿಯಾಗಿ ಸಮಾಜದ ಎಲ್ಲ ಸ್ಥರಗಳಲ್ಲಿಯೂ ಭಕ್ತರು ಮತ್ತು ಅಭಿಮಾನಿಗಳನ್ನು ಹೊಂದಿದ್ದರು. ನೊಂದವರ ಪರವಾಗಿ ಸದಾನಿಲ್ಲುತ್ತಿದ್ದ ಶ್ರೀಗಳು, ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಇಂಡಿ ತಾಲೂಕಿನ ಗೋವಿಂದಪುರ ಹಳ್ಳಿಯನ್ನು ಪುನಃ ಸ್ಥಾಪಿಸುವಲ್ಲಿ ನೇತೃತ್ವ ವಹಿಸಿದ್ದರು.
ಸಾಮಾನ್ಯ ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಅವರ ಕಷ್ಟ-ಸುಖಃಗಳನ್ನು ಆಲಿಸುತ್ತಾ ಜನಸಾಮಾನ್ಯರ ಸ್ವಾಮಿಜಿ ಆಗಿದ್ದರು. ಪ್ರಧಾನಿ, ಕೇಂದ್ರ ಮಂತ್ರಿಮಂಡಲ ಸದಸ್ಯರು, ಹಲವು ರಾಜ್ಯಗಳ ರಾಜ್ಯಪಾಲರು ಇವರ ಪರಮ ಭಕ್ತರಾಗಿದ್ದರೂ ಅವರ ಸಾವಿರಪಟ್ಟು ಜನಸಾಮಾನ್ಯ ಭಕ್ತಗಣವನ್ನು ಹೊಂದಿದ್ದರು. ಕಳೆದ ವಾರ ನಾನು ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ, ಪೂಜ್ಯರ ಆರೋಗ್ಯದ ಕುರಿತು ವಿಚಾರಿಸಿದ್ದೆ, ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೆ ಎಂಬುದನ್ನು ಎಂ.ಬಿ.ಪಾಟೀಲ್ ಸ್ಮರಿಸಿಕೊಂಡಿದ್ದಾರೆ.

error: Content is protected !!