ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ : ಧ್ರುವ ಎಂ.ಪಾಟೀಲ್

BI ಬಿಜಾಪುರ : ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಕೋಟಿ ಅಭಿಯಾನದಡಿ ಸಸಿ ನೆಡುವುದು, ರಕ್ಷಿಸುವುದು, ಪೋಷಿಸಿವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿ. ಅದರಂತೆ ಪ್ರಾಣಿ ಮತ್ತು ಪಕ್ಷಿಗಳನ್ನು ಕಾಪಾಡಿ ಮಾನವೀಯತೆ ಮೆರೆಯುವುದು ಅವಶ್ಯವಾಗಿದೆ ಎಂದು ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಎಂ.ಪಾಟೀಲ್ ಹೇಳಿದರು.
ಬಬಲೇಶ್ವರ ಶಾಂತವೀರ ಪ್ರೌಢಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು ತಾಪಮಾನ ತಡೆಗಟ್ಟುವುದು, ವಾತಾರಣದಲ್ಲಿ ಬದಲಾವಣೆ ತರುವುದು ಮತ್ತು ಪ್ರಾಣಿ ಪಕ್ಷಿಗಳು ಸಂಕಷ್ಟದಲ್ಲಿದ್ದಾಗ ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು? ಎಂಬುದನ್ನು ಪರದೆಯ ಮೇಲೆ ಪ್ರಾತ್ಯಕ್ಷಿಕೆ ವಿಡಿಯೋ ಮೂಲಕ ತೋರಿಸಿದಾಗ ವಿದ್ಯಾರ್ಥಿಗಳಲ್ಲಿ ಕೂತುಹಲವನ್ನುಂಟು ಮಾಡಿದರು. ಇಂತಹ ಕಾರ್ಯಕ್ರಮಗಳನ್ನು ದುಬೈ, ಅಮೇರಿಕಾ, ಜರ್ಮನಿ ವಿದೇಶಗಳಲ್ಲಿ ಸೇರಿದಂತೆ ಭಾರತದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೆಚ್ಚುಗೆ ಪಡೆದಿದೆ.
ಚಿತ್ರ ನಟ, ನಿರ್ದೇಶಕ ಮಾಸ್ಟರ್ ಕಿಶನ್ ಮಾತನಾಡಿದ ಅವರು ಪರಿಸರ ರಕ್ಷಣೆ ನಿಮ್ಮಿಂದಲೇ ಆಗಬೇಕು. ಮುಂಬರುವ ದಿನಗಳಲ್ಲಿ ರಕ್ಷಣೆ ಮಾಡದಿದ್ದರೆ ಆಪತ್ತಿನಲ್ಲಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕಾಗಿ ನಾವು ಭವಿಷ್ಯದಲ್ಲಿ ಆಗು-ಹೋಗುಗಳನ್ನು ಗಮನಿಸಿ ಇಂದಿನಿಂದಲೆ ತಯಾರಿ ಹೇಗೆ ನಡೆಸಬೆಂಕೆಂಬುದನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಎಸ್.ಪಿ.ಪಿ.ಎ ಪ್ರದಾನ ಸದಸ್ಯ ಕುಮಾರ ಭುವನ, ಕೋಟಿ ವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ಅರಣ್ಯಾಧಿಕಾರಿ ಪ್ರಭುಲಿಂಗ ಬುಯ್ಯಾರ ಗ್ರಾಮೀಣ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಎ.ಎಸ್.ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಎಲ್.ಡಿ.ಎ ಸಂಸ್ಥೆ ಸಂಗನಬಸವ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಬಗ್ಗೆ ಅರಿವು ಮೂಡಿಸುವ ಕಿರುನಾಟಕವನ್ನು ಪ್ರದರ್ಶಿಸಿದರು. ವಿಜಯಪುರ ಜಿಲ್ಲೆಯ ವಿವಿಧ ಕೆರೆಗಳಲ್ಲಿ ಪಕ್ಷಿಗಳ ದೃಶ್ಯವನ್ನು ತೋರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಪ್ರೌಡ ಶಾಲೆಯ 5ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ವಿ.ಡಿ.ಐಹೊಳ್ಳಿ ಪ್ರತಿಜ್ಞೆ ಬೋಧಿಸಿದರು. ಪ್ರೊ.ಎ.ಬಿ.ಬೂದಿಹಾಳ ಸ್ವಾಗತಿಸಿದರು.

error: Content is protected !!