ನಡಹಳ್ಳಿಯವರೇ ನೀರಾವರಿ ಎಂದರೆ ಪುಸ್ತಕ ಹಂಚುವ ಕೆಲಸವಲ್ಲ : ಸರತಾಜ ಬೀಳಗಿ

BI NEWS, ಬಿಜಾಪುರ : ಬರದಿಂದ ಆವರಿಸಿದ ಜಿಲ್ಲೆಯಲ್ಲಿ ನೀರು ಹರಿಸಿ ಭಗೀರಥರೆನಿಸಿಕೊಂಡ ಡಾ.ಎಂ.ಬಿ. ಪಾಟೀಲರವರ ಬಗ್ಗೆ ಮಾತನಾಡು ಯೋಗ್ಯತೆ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗಿಲ್ಲ. ನಡಹಳ್ಳಿ ತಾವು ಮೊದಲು ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತಿಸಿ, ಅಧಿಕಾರದ ದುರಾಸೆಗೋಸ್ಕರ ಪಕ್ಷದಿಂದ ಪಕ್ಷಕ್ಕೆ ಪಲಾಯನ ಮಾಡುವ ನಿಮ್ಮಂತಹ ರಾಜಕಾರಣಿಗಳಿಂದ ನಾವೇನು ಕಲಿಯುವುದು ಬೇಕಾಗಿಲ್ಲ. ಮುದ್ದೇಬಿಹಾಳ ಮತಕ್ಷೇತ್ರದ ಜನರು ನಿಮ್ಮ ಕೆಲಸದ ಬಗ್ಗೆ ಹಾಗೂ ನಿಮ್ಮ ರಾಜಕಾರಣದ ಬುದ್ಧಿ ಅರಿತಿದ್ದಾರೆ ಅವರಿಗೆ ನಾವೇನು ಹೇಳೋದು ಬೇಕಾಗಿಲ್ಲ. ಸುಮ್ನೆ ಪ್ರಚಾರಕ್ಕಾಗಿ ಒಳ್ಳೆಯ ರಾಜಕೀಯ ನಾಯಕರ ಮೇಲೆ ಇಲ್ಲಸಲ್ಲದ ಪ್ರಚೋದನೆ ಹೇಳಿಕೆ ನೀಡಿ ಟಿಆರ್‍ಪಿಗಾಗಿ ದುಸ್ಸಾಹಸ ಮಾಡಬೇಡಿ. ಬೇರೆಯವರಿಗೆ ಮಾತನಾಡುವ ಮೊದಲು ತಮ್ಮ ಯೋಗ್ಯತೆಯನ್ನು ತಿಳಿದುಕೊಳ್ಳಿ. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂದು ಎಂ.ಬಿ. ಪಾಟೀಲರ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ತಾವು ಈ ಹಿಂದೆ ತಮ್ಮ ಧರ್ಮಪತ್ನಿಗೆ ವಿಧಾನ ಸಭಾ ಚುನಾವಣೆಗೆ ಟೀಕೇಟ್ ನೀಡಿಲ್ಲ ಎಂದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಓಡಿಹೋಗಿದ್ದು ತಾವು ಮರೆತಿರಬಹುದು ಆದರೆ ನಾಡಿನ ಜನರು ಮರೆತಿಲ್ಲ. ತಮ್ಮ ಕ್ಷೇತ್ರದಲ್ಲಿ ಯಾವದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ತಾವೂ ಮಾಡಿಲ್ಲ. ಮೊದಲು ಶಾಸಕರಾಗಿ ತಮ್ಮ ಕೆಲಸ ಮಾಡಿ, ಎಂ.ಬಿ. ಪಾಟೀಲರು ಲಿಂಗಾಯತ ಹೋರಾಟದ ಮೂಲಕ ಯಾವುದೇ ರೀತಿಯ ಧರ್ಮದ್ರೋಹ ಮಾಡಿರುವುದಿಲ್ಲ. ಹಾಗೇನಾದರೂ ಅವರು ಧರ್ಮದ್ರೋಹ ಮಾಡಿದ್ದರೆ ದೇಶದ ಪ್ರಧಾನಿ ಅವರ ವಿರುದ್ಧ ಅವರ ಮತಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಿದರೂ ಸಹ ಮೋದಿ ಪ್ರಚಾರ ಗಾಳಿಗೆ ತೂರಿ ಒಂದು ಲಕ್ಷಕ್ಕಿಂತ ಹೆಚ್ಚು ಮತದಿಂದ ಆರಿಸಿ ಬಂದಿರುವುದು ತಮ್ಮಂತಹ ಇಲ್ಲ ಸಲ್ಲದ ಹೇಳಿಕೆ ನೀಡಿರುವ ಈ ವಿಚಾರದ ಮೂಲಕ ಗೊತ್ತಾಗುತ್ತದೆ.

ನೀರಾವರಿ ಅಭಿವೃದ್ಧಿ ಮಾಡುವುದೆಂದರೆ ಶಾಲೆಗಳಲ್ಲಿ ಪುಸ್ತಕ ಹಂಚುವ ನಾಟಕೀಯ ಕೆಲಸವಲ್ಲ ಎಂಬುದು ತಮ್ಮ ಗಮನಕ್ಕಿರಲಿ ಎಂದು ಅಲ್ಪ ಸಂಖ್ಯಾತ ಘಟಕದ ಬೆಳಗಾವಿ ವಿಭಾಗದ ಉಪಾಧ್ಯಕ್ಷರಾದ ಸರತಾಜ್ ಎಮ್. ಬೀಳಗಿ ನಡಹಳ್ಳಿ ವಿರುದ್ಧ ಪತ್ರಿಕಾ ಪ್ರಕಟಣೆಯ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

error: Content is protected !!