ದೇವರಹಿಪ್ಪರಗಿ : 20 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ

BI ದೇವರಹಿಪ್ಪರಗಿ: ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಥಮಾದ್ಯತೆಯಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಪ್ರತಿಯೊಂದು ರಸ್ತೆಗಳು ನವೀಕರಣಗೊಳ್ಳಳಿವೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಪಟ್ಟಣದ ಡಿಬಿಇ ಪ್ರೌಡಶಾಲೆಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 20 ಕೋಟಿ ರೂ.ಗಳ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ರಸ್ತೆಗಳ ಸುಧಾರಣೆಗೆ ಕ್ರಿಯಾಯೋಜನೆ ಸಿದ್ಧ ಪಡಿಸಲಾಗಿದೆ. ಹಂತ ಹಂತವಾಗಿ ತ್ವರಿತಗತಿಯಲ್ಲಿ ಕಾಮಗಾರಿಗಾಗಿ ಶ್ರಮಿಸಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ರಸ್ತೆಗಳ ಸುಧಾರಣೆ ಅವಶ್ಯಕವಿದೆ ಅದಕ್ಕಾಗಿ ವಿಶೇಷ ಅನುದಾನ ತರುವ ಮೂಲಕ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳು ಸೋಮನಗೌಡರ ಅಧಿಕಾರವಧಿಯಲ್ಲಿ ವೇಗ ಪಡೆದುಕೊಂಡಿವೆ. ಅವರ ತಂದೆ ಬಿ ಎಸ್ ಪಾಟೀಲ ಸಾಸನೂರ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಚಿತ್ರಣ ಬದಲಾಗಲಿದೆ. ಪ್ರತಿಯೊಬ್ಬರು ಅಭಿವೃದ್ಧಿ ಪರ ದ್ವನಿಯಾದವರಿಗೆ ಸಹಕಾರ ನೀಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಎಮ್ಮಿಗನೂರ ಹಂಪಿ ಸಾವಿರಮಠದ ವಾಮದೇವ ಮಹಾಂತ ಶಿವಾರ್ಚಾರು ಆಶೀರ್ವಚನ ನೀಡಿ ರಾಜಕಾರಣದಲ್ಲಿ ಸಜ್ಜನತೆ ಅವಶ್ಯವಾಗಿದೆ. ಸಾಮಾಜಿಕ ಕಳಕಳಿ, ಸಾರ್ವಜನಿಕರಿಗೆ ನೋಡುವ ದೃಷ್ಠಿಕೋನ ಉತ್ತಮವಾಗಿರಬೇಕು ಅಧಿಕಾರವಿದ್ದಾಗ ಅರಿವಿನಿಂದ ನಾಲ್ಕು ಜನ ಮೆಚ್ಚುವ ರೀತಿಯಲ್ಲಿ ಅಧಿಕಾರ ನಡೆಸಬೇಕು. ಇಂತಹ ಕಾರ್ಯವನ್ನು ಸ್ಥಳಿಯ ಶಾಸಕರು ಮಾಡುತ್ತಿದ್ದು, ಜನಮನ ಗಳಿಸುತ್ತಿದ್ದಾರೆ.ಕೆಲಸಗಳು ಆಮೆ ವೇಗವಾಗದೆ ಆನೆ ವೇಗ ಪಡೆಯಲಿ ಪ್ರತಿಯೊಬ್ಬರ ಸಹಕಾರ ಸಿಕ್ಕೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಪಲಕ ಅಭಿಯಂತರ ಬಿ ಬಿ ಪಾಟೀಲ,ಸಾನಿಧ್ಯ ವಹಿಸಿದ್ದ ಯರನಾಳ ವಿರಕ್ತ ಮಠದ ಗುರುಸಂಗನಬಸವ ಮಹಾಸ್ವಾಮಿಗಳು, ಸ್ಥಳಿಯ ಸದಯ್ಯನಮಠದ ವೀರಗಂಗಾಧರ ಶಿವಾಚಾರ್ಯರು, ಕರಬಂಟನಾಳದ ಗಂಗಾಧರ ಸ್ವಾಮಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕುಚಬಾಳ, ಹೆಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶದಣಿ ದೇಸಾಯಿ, ಶಂಕರಗೌಡ ಕೊಟೀಖಾನಿ ಮಾತನಾಡಿದರು. ಇದಕ್ಕೂ ಮುಂಚೆ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ದೇವರಹಿಪ್ಪರಗಿಯಿಂದ ಕೊಂಡಗೂಳಿ ರಸ್ತೆ, ಸುಮಾರು 6 ಕೋಟಿ ರೂ, ವೆಚ್ಚದ ದೇವರಹಿಪ್ಪರಗಿಯಿಂದ ಜಯವಾಡಗಿ ರಸ್ತೆ, 1.70 ಕೋಟಿ ರೂ. ವೆಚ್ಚದಲ್ಲಿ ಮೊಹರೆ ಹನುಮಂತರಾಯ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದ ರಸ್ತೆ, 1.70 ಕೋಟಿ ರೂ. ವೆಚ್ಚದಲ್ಲಿ ಡಾ. ಅಂಬೇಡ್ಕರ ವೃತ್ತದಿಂದ ತಾಂಡಾದವರೆಗಿನ ರಸ್ತೆ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸಾಹೆಬಗೌಡ ಪಾಟೀಲ ಸಾಸನೂರ, ಸುರೇಶಗೌಡ ಪಾಟೀಲ ಸಾಸನೂರ, ಉದ್ಯಮಿ ನಿತೀನ ಬಿರಾದಾರ ಚವಡಿಹಾಳ, ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಸಿದ್ದು ಬುಳ್ಳಾ, ಶಂಕರ ಬಗಲಿ, ಭೀಮನಗೌಡ ಸಿದರೆಡ್ಡಿ, ಮೋಹನಗೌಡ ಹಿರೇಗೌಡರ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ರಾಜು ಮೆಟಗಾರ ಸೇರಿದಂತೆ ವಿವಿಧ ತಾ.ಪಂ ಸದಸ್ಯರು, ಪ.ಪಂ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ರೈತರು,ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಕ್ಷಕ ಕೆ ಆರ್ ಕೊಕಟನೂರ ಸ್ವಾಗತಿಸಿದರು. ಸುಮಂಗಲಾ ಕೋಳೂರ ವಿಜಯಲಕ್ಷಿ ಮೆಟಗಾರ ನಿರೂಪಿಸಿದರು.

error: Content is protected !!