ದೇವರಹಿಪ್ಪರಗಿ : ಪಂಚಮಸಾಲಿ ಸಮೂದಾಯವರನ್ನು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆBI ದೇವರಹಿಪ್ಪರಗಿ: ರಾಜ್ಯ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮೂದಾಯವರನ್ನು ಕಡೆಗಣಿಸಿರುವುದನ್ನು ಖಂಡಿಸಿ ದೇವರಹಿಪ್ಪರಗಿಯಲ್ಲಿ ಪಂಚಮಸಾಲಿ ಸಮೂದಾಯದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬುಧವಾರ ನೂರಾರು ಪಂಚಮಸಾಲಿ ಸಮೂದಾಯದ ಯುವಕರು, ಸಾರ್ವಜನಿಕರು ಸೇರಿಕೊಂಡು ಪಟ್ಟಣದ ಬೆವಿನಕಟ್ಟಿಯಿಂದ ಮೇನ್ ಬಝಾರ್ ಬಸ್ ನಿಲ್ದಾಣದ ಮುಖಾಂತರ ರಾಷ್ಟ್ರೀಯ ಹೆದ್ದಾರಿ 50 ರ ಮೂಲಕ ಡಾ, ಅಂಬೇಡ್ಕರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಸಮೂದಾಯದ ಯುವ ಮುಖಂಡರಾದ ಸುರೇಶಗೌಡ ಪಾಟೀಲ ಹಾಗೂ ವಿನೋದಗೌಡ ಪಾಟೀಲ,ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ನಮ್ಮ ಸಮೂದಾಯದವರನ್ನು ಕಡೆಗಣಿಸಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಶಾಸಕರನ್ನು ನೀಡಿದ ನಮ್ಮ ಸಮೂದಾಯದವರನ್ನು ಕಡೆಗಣಿಸಿರುವುದು ಖಂಡನೀಯ ನಮ್ಮ ಸಮೂದಾಯದವರ ಸಹಕಾರದಿಂದಲೇ ಸರ್ಕಾರ ರಚಿಸಿ ನಮ್ಮ ಸಮೂದಾಯದವರನ್ನೆ ಕಡೆಗಣಿಸಿರುವುದು ಅನ್ಯಾಯ ಮಾಡಿದಂತಾಗಿದೆ. ಸರ್ಕಾರ ರಚಿಸುವಾಗ ಕಡ್ಡಾಯವಾಗಿ ಸಚಿವರನ್ನಾಗಿ ಮಾಡುತ್ತೇನೆ ಎಂದು ಮಾತು ನೀಡಿ ಈಗ ಅನಾವಶ್ಯಕವಾಗಿ ಮಂತ್ರಿ ಮಾಡದೆ ಪಂಚಮಸಾಲಿ ಸಮೂದಾಯದವರನ್ನು ದಮನಿಸುವ ಕಾರ್ಯ ಮಾಡುತ್ತಿರುವುದು ಸಲ್ಲದು. ಪಂಚಮಸಾಲಿ ಸಮೂದಾಯದಲ್ಲಿ ಸಾಕಷ್ಟು ಜನ ಅನುಭವಿಕರು ಶಾಸಕರಾಗಿದ್ದು ನಮ್ಮ ಸಮೂದಾಯದ ಯಾರಿಗಾದರೂ ಇಬ್ಬರಿಗೆ ಸಚಿವ ಸ್ಥಾನ ನೀಡಲೇಬೇಕು.ಇದರ ಮೂಲಕ ಪಂಚಮಸಾಲಿ ಸಮೂದಾಯದವರಿಗೆ ನ್ಯಾಯ ಒದಗಿಸಬೇಕು. ಅದಕ್ಕಾಗಿ ತಕ್ಷಣವೇ ನಮ್ಮ ಸಮೂದಾಯದ ಇಬ್ಬರು ಶಾಸಕರನ್ನು ಮಂತ್ರಿ ಮಂಡಲದಲ್ಲಿ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಧರಣಿ ಹಮ್ಮಿಕೊಂಡು ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು.

ಮಹಾಂತೇಶ ವಂದಾಲ, ದಿನೇಶ ಪಾಟೀಲ, ಮುರುಗೇಶ ಅಂಗಡಿ, ಮಡುಗೌಡ ಬಿರಾದಾರ,ರಮೇಶ ಮಾಳನೂರ, ಶ್ರೀಕಾಂತ ಸೌದಿ, ಗುರುರಾಜ ಆಕಳವಾಡಿ, ನಿಂಗು ಯಂಬತ್ನಾಳ, ಅಶೋಕ ರಾಮಗೊಂಡ, ಬಸವರಾಜ ಹಳೆಮನಿ,ಶ್ರೀಶೈಲ ರೂಡಗಿ, ಮಂಜು ಇಂಗಳಗಿ,ಅಪ್ಪು ಪಾಟೀಲ, ಸತೀಶ ಬುದಿಹಾಳ,ರವಿ ನಾಗಾವಿ,ರಮೇಶ ಯಂಬತ್ನಾಳ, ವಿಶ್ವನಾಥ ಸೌದಿ ಸೇರಿದಂತೆ ಪಂಚಮಸಾಲಿ ಸಮೂದಾಯದ ಯುವಕರು, ಹಿರಿಯರು, ದೇವರಹಿಪ್ಪರಗಿ ಸೇರಿದಮಂತೆ ವಿವಿಧ ಗ್ರಾಮಗಳಿಂದ ಬಂದ ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!