ತಜ್ಞ ವೈದ್ಯರ ಸಲಹೆವಿಲ್ಲದೇ ಎಮ್‌ಟಿಪಿಗೆ ಸಂಬಂಧಪಟ್ಟಂತೆ ಔಷಧಗಳ ಮಾರಾಟ ನಿಷೇಧ, ತಪ್ಪುವೆಸಗುವ ಮಾರಾಟ ಮಳಿಗೆ ಮಾಲೀಕರ ವಿರುದ್ಧ ಕಾನೂನಿನ ರಿತ್ಯ ಸೂಕ್ತ ಕ್ರಮ : ಜಿಲ್ಲಾಧಿಕಾರಿ ಪಾಟೀಲ

BI ಬಿಜಾಪುರ : ತಜ್ಞ ವೈದ್ಯರ ಸಲಹೆವಿಲ್ಲದೇ ಎಮ್‌ಟಿಪಿ (ಮೆಡಿಕಲ್ ಟರ್ಮಿನೆಷನ್ ಆಫ್ ಪ್ರ‍್ರೆಗ್ನೆನ್ಸಿ)ಗೆ ಸಂಬಂಧಪಟ್ಟಂತೆ ಔಷಧಗಳನ್ನು ಮಾರಾಟ ಮಾಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಕೂಡಾ ಕೆಲವು ಔಷಧ ಮಳಿಗೆಗಳಲ್ಲಿ ಇಂತಹ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹ ಮಾರಾಟಗಾರರ ವಿರುದ್ಧ ಕಾನೂನಿನ ರಿತ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಟಿಸಿ ಪಿಎನ್‌ಡಿಪಿ ಜಿಲ್ಲಾ ಸಲಹಾ ಸಮಿತಿ ಹಾಗೂ ತಪಾಸಣಾ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿದ ಅವರು ಎಮ್‌ಟಿಪಿ (ಗರ್ಭಪಾತ) ಕೈಗೊಳ್ಳುವ ಕುರಿತಂತೆ ಕಾನೂನಿನ ಅಡಿಯಲ್ಲಿ ಅವಕಾಶ ವಿರುವುದರಿಂದ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ. ಆದರೂ ಕೂಡಾ ಗರ್ಭಪಾತಕ್ಕೆ ಇಚ್ಚಿತ ಮಹಿಳೆಯರು ತಜ್ಞವೈದ್ಯರ ಸಲಹಾ ಚೀಟಿಗಾಗಿ ಸಂದೆಂದು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ತಜ್ಞವೈದ್ಯರ ಸಲಹೆವಿಲ್ಲದೆ ವಿವಿಧ ಔಷಧಿ ಅಂಗಡಿಗಳ ಮೂಲಕ ಗರ್ಭಪಾತಕ್ಕೆ ಸಂಬಂಧಪಟ್ಟ ಔಷಧಗಳನ್ನು ಕೌಂಟರ್‌ಸೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ ಮುಂದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ತಜ್ಞವೈದ್ಯರ ಸಲಹಾ ಚೀಟಿ ಆಧಾರದ ಮೇಲೆ ಗರ್ಭಪಾತಕ್ಕೆ ಸಂಬಂಧಿಸಿದ ಔಷಧ ಮಾರಾಟಕ್ಕೆ ಸಂಬಂಧಿಸಿದಂತೆ ಆಯಾ ಔಷಧಿ ಮಳಿಗೆ ಮಾಲೀಕರು ಕಡ್ಡಾಯವಾಗಿ ಸಂಬಂಧಿಸಿದ ವೈದ್ಯರ ಹೆಸರಿನೊಂದಿಗೆ ಪ್ರತ್ಯೇಕ ರಜಿಸ್ಟರ್ ನಿರ್ವಹಣೆ ಮಾಡಬೇಕು. ಅದರಂತೆ ಸ್ಟಾಕ್ (ಸಂಗ್ರಹಣಾ) ರಜಿಸ್ಟರ್‌ದಲ್ಲಿ ಓಪನಿಂಗ್ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್ ಅನ್ನು ಸಹ ತಪ್ಪದೇ ನಮೂದಿಸುವಂತೆ ಜಿಲ್ಲಾಧಿಕಾರಿಗಳು ಇಂದಿನ ಸಭೆ ಮೂಲಕ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ನರ್ಸಿಂಗ್‌ಹೋಮ್ ಮೂಲಕ ಎಮ್‌ಟಿಪಿ ಮಾಡಿಕೊಳ್ಳುವ ಮಹಿಳೆಯರ ಕುರಿತು ಸಮಗ್ರ ಮಾಹಿತಿಯನ್ನು ಕೂಡಾ ಸಕ್ಷಮ ಪ್ರಾಧಿಕಾರದ ಉಪಾಧ್ಯಕ್ಷರು ಆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (ಎಫ್‌ಡಬ್ಲೂಓ) ಇವರಿಗೆ ಕಡ್ಡಾಯವಾಗಿ ಸಲ್ಲಿಸುವಂತೆಯೂ ಕೂಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪ್ರಸವ ಪೂರ್ವ ಭ್ರೂಣಲಿಂಗ ಪತ್ಯೆ ನಿಷೇಧ ಕಾನೂನಿನ ಉಲ್ಲಂಘನೆಗೆ ಸಂಬಂಧಿಸಿದ ಒಂದು ಆಸ್ಪತ್ರೆಗೆ ಲೈಸನ್ಸ್ ರದ್ದತಿ ಬಗ್ಗೆ ಕಾರಣ ಕೇಳಿ ನೋಟಿಸ್ ಸಹ ಜಾರಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪ್ರಸವ ಪೂರ್ವ ಭ್ರೂಣಲಿಂಗ ಪತ್ಯೆ ನಿಷೇಧ ಕಾನೂನಿನ ಕುರಿತಂತೆ ಗಡಿ ಭಾಗದ ವೈದ್ಯರನ ಸಂಬಂಧಪಟ್ಟವರಿಗೆ ಇದೇ ಫೆ, 25 ರಂದು ಕಾರ್ಯಾಗಾರವೊಂದನ್ನು ಸಹ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಕ್ಯಾನಿಂಗ್ ಮಷಿನ್ ಬಳಕೆಗೆ ಸಂಬಂಧಿಸಿದಂತೆ ಒಂದು ಆಸ್ಪತ್ರೆಯಿಂದ ಬಂದಿರುವ ಹೊಸ ಅರ್ಜಿಯನ್ನು ಹಾಗೂ ಆಸ್ಪತ್ರೆ ವರ್ಗಾವಣೆ ಕೋರಿ ಬಂದಿರುವ ಒಂದು ಅರ್ಜಿಯನ್ನು ಪರಿಶೀಲಿಸಿ ಆಯಾ ಆಸ್ಪತ್ರೆಗಳು ಕಾನೂನಿನ ರಿತ್ಯೆ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಸ್ಕ್ಯಾನಿಂಗ್ ಸ್ಥಳ, ಕೊಠಡಿ, ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಅವಶ್ಯಕ ಸೌಕರ್ಯಗಳಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು. ಚೆಕ್‌ಲಿಸ್ಟ್ ದೃಢಿಕರಣ ಆಧಾರದ ಮೇಲೆ ಸ್ಕ್ಯಾನಿಂಗ್ ಮಷಿನ್ ಬಳಕೆ ಅನುಮತಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ಮಕ್ಕಳ ತಜ್ಞ ಎಲ್.ಎಚ್.ಬಿದರಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!