ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡಬಾರದು ಎಂದು ಆಗ್ರಹಿಸಿ ಮನವಿ

BI ಬಿಜಾಪುರ : ಮೈಸೂರು ಹುಲಿ‌ ಟಿಪ್ಪು ಸುಲ್ತಾನ ಜಯಂತಿಯನ್ನು ಈಗಿನ ಬಿಜೆಪಿ ಸರ್ಕಾರ ರದ್ದುಗೊಳಿಸಿರುವ ಕ್ರಮಕ್ಕೇ ಜೈ ಭೀಮ‌ಸೇನಾ ಸಂಘಟನೆ ಖಂಡಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ ೨೦೧೬ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಅನುಮತಿ ನೀಡಿದ್ದು ಕರ್ನಾಟಕದ ಜನರು ಹರ್ಷ ವ್ಯಕ್ತ ಪಡಿಸಿದ್ದರು, ಸದ್ಯಕ್ಕೆ ದಿಡೀರನೇ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಗೊಳಿಸಿ ದಲಿತ, ಹಿಂದುಳಿದ ಅಲ್ಪಸಂಖ್ಯಾತ ರ ಭಾವನೆಯನ್ನು ಕೆರಳಿಸಿದೆ. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನರ ಜಯಂತಿಯನ್ನು ರದ್ದುಗೊಳಿಸದೇ, ಟಿಪ್ಪುವಿನ ಜಯಂತಿಯನ್ನು ಹಿಂದಿನಂತೆ ಆಚರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೈ‌ಭೀಮ ಸೇನಾ ರಾಜ್ಯ ಸಂಚಾಲಕ ಸಂತೋಷ ಭಾಸ್ಕರ, ಸುನೀಲ್ ‌ಹೊಸಳ್ಳಿ, ಯಶವಂತ ದೊಡಮನಿ, ಸಂತೋಷ ವಾಲೀಕಾರ, ನಜೀರ ಅಹ್ಮದ ಗುಲಬರ್ಗಾ, ಅಲ್ಪಾಫ್ ಡೋಣೂರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!