ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ನಿಧನಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಾಪ

BI NEWS, ಬಿಜಾಪುರ : ಖ್ಯಾತ ಸಾಹಿತಿ, ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸೃತ ಡಾ.ಗಿರೀಶ ಕಾರ್ನಾಡ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ತಮ್ಮ ನಾಟಕಗಳ ಮೂಲಕ ಬಸವ ಪ್ರಜ್ಞೆಯನ್ನು ಸದಾ ಎಚ್ಚರಿಸುವ ಕಾರ್ಯವನ್ನು ಮಾಡಿದ ಅವರು ಸಮಕಾಲಿನ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ತಮಗೆ ಸರಿ ಎನಿಸಿದ್ದನ್ನು ನೇರ, ನಿಷ್ಠುರ ಮಾತುಗಳ ಮೂಲಕ ವ್ಯಕ್ತ ಪಡಿಸುತ್ತಿದ್ದ ಅವರು ಕನ್ನಡದ ಚಿಂತನ ಶೀಲ ಸಾಕ್ಷಿ ಪ್ರಜ್ಞೆಯಾಗಿದ್ದರು. ಅವರ ನಿಧನ ನಾಡಿಗೆ, ಕನ್ನಡ ಭಾಷೆಗೆ ಅಪಾರ ನಷ್ಟ ಉಂಟುಮಾಡಿದೆ. ಇಡೀ ದೇಶದ ರಂಗಭೂಮಿ ಇಂದು ಶೋಕದಲ್ಲಿ ಮುಳುಗಿದ್ದು, ಕಾರ್ನಾಡರ ಅಂತರ ಶಕ್ತಿಯನ್ನು ತೋರಿಸುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

error: Content is protected !!