ಜೀವನಾವಶ್ಯಕ ವಸ್ತುಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಕ್ರೀಮಿನಲ್ ಪ್ರಕರಣ : ವೈ.ಎಸ್ ಪಾಟೀಲ್

ಕೋವಿಡ್-19 ಪರಿಸ್ಥಿತಿಯ ಲಾಭವನ್ನು ಪಡೆದು ಸಗಟು ಮಾರಾಟಗಾರರಾಗಲಿ ಅಥವಾ ಕಿರಾಣಿ ಅಂಗಡಿಯವರಾಗಲಿ ಅಥವಾ ಇತರೆ ವ್ಯಾಪಾರಸ್ಥರು ಅಗತ್ಯ ಸಾಮಗ್ರಿಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಆಕರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಅದರಂತೆ ಕೊರೋನಾ ವೈರಸ್‌ಗೆ ಸಂಬಂಧಪಟ್ಟಂತೆ ಯಾರಾದರು ಸುಳ್ಳುವದಂತಿ ಹಬ್ಬಿಸುವುದಾಗಲಿ ಅಥವಾ ವಿವಿಧ ಮಾಧ್ಯಮಗಳ ಮೂಲಕ ತಪ್ಪು ಸಂದೇಶ ನೀಡುವಂತಹ ಚಟುವಟಿಕೆ ನಡೆಸಿದ್ದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಇಂದು ಪೂರ್ವಾಹ್ನವರೆ ಜಿಲ್ಲೆಗೆ ಒಟ್ಟು 321 ಜನರು ವಿದೇಶದಿಂದ ಆಗಮಿಸಿರುವ ಬಗ್ಗೆ ವರದಿಯಾಗಿದೆ. 36 ಜನ 28 ದಿನಗಳನ್ನು ಪೂರ್ಣಗೊಳಿಸಿದ್ದಾರೆ. 176 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 109 ಜನರು ಹೋಮ್‌ಕ್ವಾರಂಟೈನ್‌ದಲ್ಲಿದ್ದಾರೆ. 7 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

error: Content is protected !!