ಜಿಲ್ಲೆಯಾದ್ಯಂತ ಏಕಕಾಲಕ್ಕೆ ಎಸ್.ಎಸ್.ಎಲ್.ಸಿ ಪೂರ್ವ ಸಿದ್ದತಾ ಪರೀಕ್ಷೆ

BI ಬಿಜಾಪುರ : 2020ನೇ ಸಾಲಿನ ಮಾರ್ಚ\ಎಪ್ರೀಲ್‌ನಲ್ಲಿ ನಡೆಯು ಎಸ್.ಎಸ್.ಎಲ್.ಸಿ ಪರೀಕ್ಷೇಗಳಿಗೆ ಮಕ್ಕಳನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ, ಪೂರ್ವ ಸಿದ್ದತಾ ಪರೀಕ್ಷೆಯನ್ನು ಜಿಲ್ಲೆಯಾದ್ಯಂತ ಏಕರೂಪದ ವೇಳಾಪಟ್ಟಿ ಅನುಸಾರ ದಿನಾಂಕ 17-02-2020 ರಿಂದ ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ ಪ್ರಸನ್ನಕುಮಾರ ಅವರು ತಿಳಿಸಿದರು.

ಮಂಡಳಿಯು ನೀಡಿರುವ ವೇಳಾಪಟ್ಟಿ ಅನುಸಾರ ಶಾಲೆಯಲ್ಲಿ ಅಂದಿನ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ಆಯಾ ದಿನ ಪರೀಕ್ಷಾ ಸಮಯದ 10 ನಿಮಿಷ ಮುಂಚಿತವಾಗಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಲಕೋಟೆಗಳನ್ನು ತೆರೆದು, ವಿದ್ಯಾರ್ಥಿಗಳಿಗೆ ಪರೀಕ್ಷ ಸಮಯಕ್ಕೆ ವಿತರಿಸಲು ಕಟ್ಟು ನಿಟ್ಟಾದ ಕ್ರಮಗಳನ್ನು ಮುಖ್ಯ ಶಿಕ್ಷಕರು ಅನುಸರಿಸಬೇಕು.

ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ನಕಲು ಮುಕ್ತವಾಗಿ ನಡೆಸಬೇಕು, ಒಂದುವೇಳೆ ಇಲಾಖಾ ನಿಯಮಾವಳಿಗೆ ವಿರುದ್ಧವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷ ಸಮಯದಲ್ಲಿ ಅಕ್ರಮ ನಕಲು ಹಾಗೂ ಪ್ರಶ್ನೆ ಪತ್ರಿಕೆಯ ಪೋಟೋ ತಗೆದು ವ್ಯಾಟ್ಸಪ್ ಮೂಲಕ ಹರಿಬಿಡುವುದು, ಪರೀಕ್ಷ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಕಂಡುಬಂದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ ಪ್ರಸನ್ನಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!