ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

BI ಬಿಜಾಪುರ : ಕರ್ನಾಟಕ ರಾಜ್ಯೋತ್ಸವ ನಾಡ ಹಬ್ಬದ ಅಂಗವಾಗಿ ಜಿಲ್ಲಾಢಳಿತದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ
ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಜಿಲ್ಲಾಪಂಚಾಯತ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾದ 6 ಜನ ಆಯ್ಕೆ ಸಮಿತಿ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಜನ ಸಾಧಕರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಕ್ಷೇತ್ರಕ್ಕೆ ಹಳ್ಳೂರಿನ ಪ್ರೋ. ದೊಡ್ಡಣ್ಣ ಬ. ಬಜೆಂತ್ರಿ, ಮನುಗೂಳಿಯ ಶೇಷರಾವ್ ಸಿದ್ರಾಮಪ್ಪ ಮಾನೆ, ಸಂಗೀತ ಕ್ಷೇತ್ರಕ್ಕೆ ಉಮರಜದ ಡಾ. ರೇಖಾ ಬಸವರಾಜ ಪಾಟೀಲ, ದಿಂಡವಾರದ ನಿಜಗುಣೇಶ ಸಂಗಪ್ಪ ಹೂಗಾರ, ಭರತನಾಟ್ಯ ಕ್ಷೇತ್ರಕ್ಕೆ ಮನೂರಿನ ಕುಮಾರಿ ಶ್ರೆಯಾ ಪ್ರಾಣೇಶ ಪಾಟೀಲ, ವೃತ್ತಿ ರಂಗಭೂಮಿ ಕ್ಷೇತ್ರಕ್ಕೆ ಗೊಳಸಂಗಿಯ ಪ್ರಭು ಬಸಪ್ಪ, ಹವ್ಯಾಸಿ ರಂಗಭೂಮಿ ಕ್ಷೇತ್ರಕ್ಕೆ ಬೋಳೆಂಗಾವದ ಸೋಮಶೇಖರ ಚಂದ್ರಾಮ ಚಾಂದಕವಟೆ, ಚೌಡಕಿಪದಗಳು (ಜಾನಪದ) ಕ್ಷೇತ್ರಕ್ಕೆ ಕಾಖಂಡಕಿಯ ಶ್ರೀಮತಿ ಕಮಲವ್ವ ಕೂಸಪ್ಪ ಸಿದರಡ್ಡಿ, ಡೊಳ್ಳಿನ ಗಾಯನ (ಜಾನಪದ) ಕ್ಷೇತ್ರಕ್ಕೆ ನಿಡೋಣಿಯ ಸುರೇಶ ರಾಮಚಂದ್ರ ಜೋಶಿ, ಶಿಲ್ಪಕಲೆ ಕ್ಷೇತ್ರಕ್ಕೆ ಚಿಮ್ಮಲಗಿಯ ಬ್ರಹ್ಮಾನಂದ ಕೃಷ್ಣಪ್ಪ ಮಾಯಾಚಾರಿ ಇವರಿಗೆ ನಿಡಲಾಗುತ್ತಿದೆ.

ಚಿತ್ರಕಲೆ ಕ್ಷೇತ್ರಕ್ಕೆ ವಿಜಯಪುರದ ವಿ.ವಿ.ಹಿರೇಮಠ, ಶಿಕ್ಷಣ ಕ್ಷೇತ್ರಕ್ಕೆ ಶಳ್ಳಗಿಯ ಶಿವಾನಂದ ನಾಗಪ್ಪ ಕೆಲೂರ, ಕ್ರೀಡಾ ಕ್ಷೇತ್ರಕ್ಕೆ ಉತ್ನಾಳದ ಬಸವರಾಜ ಎನ್ ಬಾಗೇವಾಡಿ, ಕನ್ನಡ ಸೇವೆ ಕ್ಷೇತ್ರಕ್ಕೆ ವಿಜಯಪುರದ ಪ್ರಕಾಶ ವಿಠ್ಠಲ ಕುಂಬಾರ, ಕೃಷಿ ಕ್ಷೇತ್ರಕ್ಕೆ ಬಳ್ಳೊಳ್ಳಿಯ ಸಿದ್ದಪ್ಪ ಸೂರಪ್ಪ ಸಗಾಯಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಜಯಪುರದ ಮಂಜುನಾಥ ಕೊಣಸೂರ, ದೇವೇಂದ್ರ ಕೆ. ಹೆಳವರ ಹಾಗೂ ರಂಭಾಪುರದ ಶಶಿಕಾಂತ ಶ್ರೀಶೈಲ ಮೆಂಡೆಗಾರ, ಹಾಗೂ ಸಂಕೀರ್ಣ ಕ್ಷೇತ್ರಕ್ಕೆ
ಬೋರಗಿಯ ಮೌಲಾಲಿ ಕೆ ಬೋರಗಿ, ವಿಜಯಪುರದ ಅಮ್ಮನಮಡಿಲು ಚಾರಿಟೇಬಲ್ ಟ್ರಸ್ಟ್ (ರಿ) ವಿಜಯಪುರ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

error: Content is protected !!