ಜಿಲ್ಲಾಧಿಕಾರಿಗಳಿಂದ ವಿವಿಧ ಚೆಕ್‍ಪೋಸ್ಟ್ ಹಾಗೂ ಮತಗಟ್ಟೆಗಳ ಪರಿಶೀಲನೆ

BI NEWS, ಬಿಜಾಪುರ : ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿಗಳಾದ ವೈ,ಎಸ್ ಪಾಟೀಲ್ ಅವರು ಇಂದು ವಿಜಯಪುರ ತಾಲ್ಲೂಕಿನ ಯತ್ನಾಳ ಹಾಗೂ ಜಾಲಗೇರಿ ಗ್ರಾಮಗಳಿಗೆ ಭೇಟಿನೀಡಿ ಚುನಾವಣಾ ಅಂಗವಾಗಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇಂದು ಯತ್ನಾಳ ಹಾಗೂ ಜಾಲಗೇರಿ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‍ಗಳಿಗೆ ಭೇಟಿನೀಡಿ ಅಲ್ಲಿ ಕೈಗೊಳ್ಳಲಾಗುತ್ತಿರುವ ವಾಹನಗಳ ತಪಾಸಣೆ ಕಾರ್ಯಗಳನ್ನು ಪರಿಶೀಲಿಸಿ ನಿಯೋಜಿಸಿರುವ ತಂಡಗಳು ಅತ್ಯಂತ ಜಾಗೃತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅದರಂತೆ ಈ ಎರಡೂ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳ ವ್ಯವಸ್ಥೆಗಳನ್ನು ಪರಿಶೀಲಿಸಿ ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳ ಹಾಗೂ ಸಾರ್ವಜನಿಕರಿಗೆ ಪೂರೈಕೆ ಆಗುತ್ತಿರುವ ಕುಡಿಯುವ ನೀರಿನ ಪರಿಶೀಲನೆ ನೆಡೆಸಿ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಉಪಸ್ಥಿತರಿದ್ದರು.

error: Content is protected !!