ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರಿಗಾಗಿ ಉಚಿತ ಹಿಟ್ಟಿನ ಗಿರಣಿ ಪ್ರಾರಂಭ

BI ಬಿಜಾಪುರ : ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಹೊಸ ಹಿಟ್ಟಿನ ಗಿರಣಿ ಸ್ಥಾಪಿಸಲಾಗಿದ್ದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದ್ಘಾಟಿಸಿದರು.
ಪಂಚಾಯತಿಗೆ ಕರ ತುಂಬಿದ ಎಲ್ಲಾ ನಿವಾಸಿಗಳು ಇದರ ಸೌಲಭ್ಯ ಪಡೆದು ಕೊಳ್ಳಬಹುದಾಗಿದ್ದು, ಖಾರ ಕುಟ್ಟುವ ಮಿಷನ್, ಗೋಧಿ ಹಾಗೂ ಜೋಳ ಬೀಸುವ ಮಿಷನ್, ವಿವಿಧ ರವಾ ಬೀಸುವ ಮಿಷನ್ ಹೀಗೆ ಮೂರು ಮಿಷನ್ ಗಳನ್ನು ಹೊಂದಿದೆ.
ಪ.ಜಾ, ಪ.ಪಂ, ಅಂಗವಿಕಲ ಹಾಗೂ ಮಾಜಿ ಸೈನಿಕರಿಗೆ ಉಚಿತವಾಗಿ ಬೀಸಿ ಕೊಡಲಾಗುವುದು ಮತ್ತು ಇತರ ಜನಾಂಗಕ್ಕೆ ಕೇವಲ 2ರೂ ಗಳಿಗೆ ಸೊಲಗಿಯಂತೆ ಬೀಸಿ ಕೊಡಲಾಗುವುದು.
ಉದ್ಘಾಟನೆಯಲ್ಲಿ ಹೊನಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾಬಾಯಿ ಮಮದಾಪೂರ, ಉಪಾಧ್ಯಕ್ಷ ಸಾಬು ಕವಟಗಿ, ಅಭಿವೃದ್ಧಿ ಅಧಿಕಾರಿ ಎಸ್.ಆರ್. ಕಟ್ಟಿ, ಕಾರ್ಯದರ್ಶಿ ಕುಮಾರಿ ಎ.ಎಂ.ನಿಂಬಾಳಕರ ಹಾಗೂ ಇತರರಿದ್ದರು.

error: Content is protected !!