ಗೋ ಪ್ರಕೋಷ್ಠದಿಂದ ಗೋ ಪೂಜಾ ಕಾರ್ಯಕ್ರಮ

BI ಬಿಜಾಪುರ : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠ ಘಟಕದ ವತಿಯಿಂದ ಗೋ ಪೂಜೆ ಕಾರ್ಯಕ್ರಮ ನಗರದ ಶಿವಾಜಿ ವೃತ್ತದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ದಿನ ನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು, ಹಸುವನ್ನು ಭೂಮಿ ತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯ ಬೇಕಾಗುವ ಹಾಲು ಮಜ್ಜಿಗೆ, ಸಗಣಿಯನ್ನು ಗೊಬ್ಬರ ತಯಾರಿಕೆ ಗಂಜಲವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪ ಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ, ಗೋವುಗಳನ್ನು ಯಾರು ಕಸಾಯಿ ಕಾನೆಗೆ ನೀಡಬೇಡಿ. ಗೋವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದರು.

ಈ ಸಂದರ್ಭದಲ್ಲಿ ಗೋ ಪ್ರಕೋಷ್ಟ ರಾಜ್ಯ ಸಹ ಸಂಚಾಲಕರಾದ ವಿಜಯ ಜೋಶಿ ಮಾತನಾಡಿ, ದೀಪಾವಳಿಯಲ್ಲಿ ಗೋ ಪೂಜೆ ಮಾಡುವುದು ಬಹಳ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನು ಗೋವಿನ ಹಬ್ಬ ಎಂದು ಕರೆಯುವುದುಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಅನಾಧಿ ಕಾಲದಿಂದಲೂ ಗೋ ಸಂಕಲವನ್ನು ಅವಲಂಬಿಸಿದ್ದಾರೆ. ಸದಾ ರೈತರ ಸಂಗಾತಿಯಾಗಿರುವ ಗೋ ಸಂಕುಲಕ್ಕೆ ನಾವೆಷ್ಟು ಅಭಾರಿಯಾಗಿದ್ದರೂ ಸಾಲದು. ದೀಪಾವಳಿಯಲ್ಲಿ ನೆರವೇರುವ ಗೋಪೂಜೆಯ ಸಂಸ್ಕøತಿಯತ್ತ ಯುವ ಮನಸ್ಸುಗಳು ಆಸಕ್ತಿ ತೋರಿಸಲಿ. ವಾಸ್ತವದಲ್ಲಿ ಕೇವಲ ಹಳ್ಳಿಗಳಲ್ಲಿ ಮಾತ್ರ ಕಂಡು ಬರುವ ಇಂಥ ಆಚರಣೆಗಳು , ಸಂಪ್ರದಾಯಗಳು ಭವಿಷ್ಯದಲ್ಲಿಯೂ ಕೂಡ ನಮ್ಮ ಆಚರಣೆಯಲ್ಲಿರಲಿ. ಈ ಮೂಲಕ ಮುಂದಿನ ಪೀಳಿಗೆಗಳಿಗೂ ಇಂಥ ಸಂಸ್ಕøತಿಗಳ ಪರಿಚಯವಾಗಲಿ ಎಂದರು.

ಜಿಲ್ಲಾ ಗೋ ಪ್ರಕೋಷ್ಠ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಸಾಬು ಮಾಶ್ಯಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ವಿನಾಯಕ ದಹಿಂಡೆ, ಕೃಷ್ಣಾ ಗುನಾಳಕರ, ರಾಕೇಶ ಕುಲಕರ್ಣಿ, ವಿಠ್ಠಲ ದಾದಾ, ನಿತೀನ ದಹಿಂಡೆ, ಹರೀಶ ಜೋಶಿ, ಮುತ್ತಪ್ಪ ಲಕ್ಷ್ಮಣ ಪಕೀರಪ್ಪಗೋಳ, ಬಸು ವಿಜಾಪುರ, ಮಲಕಾರಿ ವಿಜಾಪುರ, ಸಂಗಮೇಶ ಹಾವರಗಿ, ಶ್ರೀಶೈಲ ಗೌಡನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

error: Content is protected !!