ಗುಂಟಾ ನಿವೇಶನ ರಚನೆ-ಮಾರಾಟ-ಖರೀದಿ ಕಾನೂನು ಬಾಹಿರ

BI ಬಿಜಾಪುರ : ಬಿಜಾಪುರ ನಗರದಲ್ಲಿ ಶೇತ್ಕಿ ಜಮೀನುಗಳನ್ನು ಗುಂಟಾ ನಿವೇಶನ ರಚಿಸಿ ಮಾರಾಟ ಮಾಡುತ್ತಿರುವುದು ಕಂದಾಯ ಇಲಾಖೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಇಂತಹ ಗುಂಟಾ ನಿವೇಶನಗಳನ್ನು ರಚಿಸುವುದಾಗಲಿ, ಮಾರಾಟ ಮಾಡುವುದಾಗಲಿ, ಖರೀದಿ ಮಾಡುವುದಾಗಲಿ ಕಾನೂನು ಬಾಹಿರವಾಗಿದೆ
ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಿಜಾಪುರ ನಗರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕೆಲ ಭೂ ಮಾಲೀಕರು ಹಾಗೂ ಅವರಿಂದ ಪರಭಾರೆ ಪಡೆದವರು ತಮ್ಮ ಶೇತ್ಕಿ ಜಮೀನುಗಳನ್ನು ಖಾಸಗಿಯಾಗಿ
ವಿಭಾಗಿಸಿ ಗುಂಟೆವಾರು ನಿವೇಶನ ರಚನೆ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ರೀತಿ ಶೇತ್ಕಿ ಜಮೀನುಗಳನ್ನು ಗುಂಟಾ ನಿವೇಶನ ರಚಿಸಿ ಮಾರಾಟ ಮಾಡುತ್ತಿರುವುದು ಕಂದಾಯ ಇಲಾಖೆ
ಹಾಗೂ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆಗಳನ್ನು ಉಲ್ಲಂಘನೆ ಮಾಡಿದಂತಾಗುಗುತ್ತದೆ.

ಇಂತಹ ಗುಂಟಾ ನಿವೇಶನಗಳನ್ನು ತಡೆಹಿಡಿಯಲು ಜಿಲ್ಲಾಡಳಿತವು ಟಾಸ್ಕಫೋರ್ಸ್ ಸಮಿತಿ ರಚಿಸಿದ್ದು, ಈ ಸಮಿತಿಯು ಗುಂಟೆಗಳನ್ನು ರಚನೆ ಮಾಡಿ ಮಾರುವವರ ಮೇಲೆ ಹಾಗೂ ಖರೀದಿ
ಮಾಡಿದವರ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಂಡು ಲೇಔಟ್‍ಗಳನ್ನು ಮತ್ತು ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು. ಈಗಾಗಲೇ ಕಟ್ಟಡ ನಿರ್ಮಿಸಿದ್ದರೆ ಕಟ್ಟಡಗಳನ್ನು ನೆಲಸಮ
ಮಾಡಲಾಗುವುದು. ಸಾರ್ವಜನಿಕರು ಇಂತಹ ಗುಂಟಾ ಲೇಔಟ್ ಮಾಡುವುದಾಗಲಿ, ಗುಂಟಾ ನಿವೇಶನ ಮಾರಾಟ ಮಾಡುವುದಾಗಲಿ ನಿವೇಶಗಳನ್ನು ಖರೀದಿ ಮಾಡುವುದಾಗಲಿ ಹಾಗೂ ಅಂತಹ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸುವುದಾಗಲಿ ಮಾಡಿದ್ದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

error: Content is protected !!