ಗಿರೀಶ ಕಾರ್ನಾಡ್ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ

BI NEWS, ಬಿಜಾಪುರ : ಅಂತರರಾಷ್ಟ್ರೀಯ ಖ್ಯಾತಿಯ ಸಾಹಿತಿ, ನಟ, ನಿರ್ದೇಶಕ, ಜ್ಞಾನಪೀಠ ಪುರಸ್ಕøತ ಹಾಗೂ ನಾಟಕಕಾರ ಗಿರೀಶ ಕಾರ್ನಾಡ ಅವರ ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ನಾಡು ಕಂಡ ಅತ್ಯಂತ ಪ್ರಭಾವಿ ಸಾಹಿತಿಗಳು ಹಾಗೂ ವಿದೇಶಕ್ಕೂ ಕನ್ನಡ ಸಾಹಿತ್ಯವನ್ನು ಪರಿಚಯಿಸಿದವರು. ಕನ್ನಡ ನಾಡು, ನುಡಿ, ಭಾಷೆಯ ವಿಷಯದಲ್ಲಿ ಅನೇಕ ಸಾಹಿತ್ಯಿ ವಿಚಾರಗಳನ್ನು ಮಂಡಿಸಿದವರು. ತಮ್ಮ ನಾಟಕಗಳ ಮೂಲಕ ಸಮಾಜದ ಓರೇ ಕೊರೆಗಳನ್ನು ತಿದ್ದಿದಂತವರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಡಾ.ಗಿರೀಶ್ ಕಾರ್ನಾಡ್ ಅವರನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಹಾಗೂ ಇವರ ಆಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

error: Content is protected !!