ಗಂಗೂ ಬಾಯಿ ಹಾನಗಲ್ ಯೂನಿವರ್ಸಿಟಿ ಮೇಲೆ ರಾಜಕೀಯದ ಕುತಂತ್ರ ?

BI NEWS, ಬಿಜಾಪುರ : ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗುಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಕುಲಪತಿಗಳ ಆಯ್ಕೆಯ ವಿಚಾರದಲ್ಲಿ ರಾಜಕೀಯತೆ ನಡೆಯುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಯುಜಿಸಿ ನಿಯಮಾವಳಿಯ ಪ್ರಕಾರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ,ಹಾಗೂ ವಿಷಯದಲ್ಲಿ ಅನುಭವವನ್ನು ಹೊಂದಿರುವ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ಮಾಡಬೇಕೆಂಬ ನಿಯಮವಿದೆ. ಈ ಹಿಂದೆ ಅನ್ಯ ಭಾಷೆಯ ಪ್ರಾಧ್ಯಾಪಕರನ್ನು ಒಳಗೊಂಡಂತೆ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು ಹಾಗು ಶಿಫಾರಸ್ಸು ಮಾಡಲಾಗಿತ್ತು ಆದ್ರೆ ನಿಯಮಾವಳಿಯನ್ನು ಮೀರಿ ಸಿಲೆಕ್ಷನ್ ನಡೆದಿದೆ ಎಂಬ ಕಾರಣಕ್ಕಾಗಿಯೇ ಕಲಪತಿಯ ಆಯ್ಕೆಯನ್ನು ರಾಜ್ಯಪಾಲರು ಹಿಂದಿರುಗಿಸಿದ್ದರು. ಈಗ ಅದೇ ರೀತಿ ಮತ್ತೆದೆ ಪ್ರಯತ್ನ ನಡೆಯುತ್ತಿದೆ ಎಂದು ಹೇಡಲಾಗಿದೆ. ಇದೇ ಮಂಗಳವಾರ 16/07/19ಕ್ಕೆ ನೆಡದ ಉನ್ನತ ಶಿಕ್ಷಣದ ಸಿಲೆಕ್ಷನ್‌ ಕಮಿಟಿ ಸಭೆಯಲ್ಲಿ ಯುಜಿಸಿ ನಿಯಮಕ್ಕೆ ವಿರುದ್ಧವಿದ್ದರೂ, ಅನ್ಯ ಭಾಷೆಯ ವಿಷಯ ತಜ್ಞರ ಹೆಸರನ್ನೇ ಮತ್ತೆ ಪ್ರಸ್ಥಾಪಿಸಲಾಗಿದೆ ಹಾಗೆ ವಯೋಮಾನ ಮೀರಿದ ಪ್ರದ್ಯಾಪಕರನ್ನು ಶಿಫಾರಸ್ಸು ಮಾಡಲಾಗಿದೆ . ಇಂಗ್ಲೀಷ್‌ ನಿವೃತ್ತಿ ಪ್ರಾಧ್ಯಾಪಕರಾಗಿರುವ ಕೆ.ಟಿ ಸುನೀತಾ, ನಿವೃತ್ತ ಐಎಎಸ್‌ ಅಧಿಕಾರಿ ಮದ್ದು ಮೋಹನ್‌, ಸಂಗೀತ ನಿವೃತ್ತಿ ಪ್ರಾಧ್ಯಾಪಕಿ ಬಿ.ಎಂ ಜಯಶ್ರೀಯರ (ಎಂ ಪಿ ಎಸ )ಹೆಸರು ಕುಲಪತಿಯ ಸ್ಥಾನಕ್ಕೆ ಕೇಳಿಬರುತ್ತಿದೆ. ಮೂರೂ ಆಯಾರ್ಥಿಗಳಿಗು ಈಗಾಗಲೇ 63 ವರ್ಷ ಮೀರಿರುತ್ತಾರೆ ಯಾರೋಬರಿಗೂ ನಾಲ್ಕು ವರೆ ವರ್ಷಕಗಳ ಕುಲಪತಿ ಅವಧಿಯು ಪೂರ್ಣವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಡಲಾಗಿದೆ.

error: Content is protected !!