ಕೋವಿಡ್-19 ಮುನ್ನೆಚ್ಚರಿಕೆಯೊಂದಿಗೆ “ಹಣ್ಣು-ತರಕಾರಿ ಮಾರಾಟ ಕೇಂದ್ರದಲ್ಲಿ ಸುರಕ್ಷಿತವಾಗಿ ಗ್ರಾಹಕರು ಪಡೆಯುವಂತೆ ನೋಡಿಕೊಳ್ಳಿ” : ಡಿಸಿ ವೈ.ಎಸ್ ಪಾಟೀಲ

BI ಬಿಜಾಪುರ : ಕೋವಿಡ್-19 ಹಿನ್ನೆಲೆ ವಿಜಯಪುರ ನಗರದ ಜನತೆಗೆ ಅನಾನುಕೂಲವಾಗದಂತೆ ಮತ್ತು ನಿತ್ಯ ಉಪಯೋಗಕ್ಕಾಗಿ ಅಗತ್ಯವಿರುವ ಹಣ್ಣು-ತರಕಾರಿ ಸರಬರಾಜು ಮತ್ತು ಮಾರಾಟ ಮಾಡಲು ಈ ಕೆಳಗಿನಂತೆ ರೂಪರೇಷೆಯಂತೆ ಕ್ರಮವಹಿಸಲು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ವಿಜಯಪುರ ನಗರಕ್ಕೆ ಪ್ರತಿನಿತ್ಯ ಬಸವನ ಬಾಗೇವಾಡಿ ರಸ್ತೆ, ತಿಕೋಟಾ ರಸ್ತೆ, ಸೋಲಾಪೂರ ರಸ್ತೆ, ಬಬಲೇಶ್ವರ ರಸ್ತೆ, ಕೋಲ್ಹಾರ ರಸ್ತೆ ಹಾಗೂ ಸಿಂದಗಿ ರಸ್ತೆಗಳಿಂದ ರೈತರ ಆವಕವಾಗುತ್ತಿದ್ದು, ವಿಜಯಪುರ ನಗರದಲ್ಲಿ ಅಧಿಕ ಜನದಟ್ಟಣೆ ನಿಯಂತ್ರಣಕ್ಕೆ ತಾತ್ಕಾಲಿಕ ಸೆಟ್‌ಲೈಟ್ ತರಕಾರಿ ಕೇಂದ್ರಗಳನ್ನು ಸ್ಥಾಪಿಸಲು ಅವರು ಸೂಚಿಸಿದ್ದಾರೆ.

ಅದರಂತೆ ಬಸವನ ಬಾಗೇವಾಡಿ ರಸ್ತೆಯಿಂದ ಆಗಮಿಸುವವರಿಗೆ ಚಿದಂಬರೇಶ್ವರ ದೇವಸ್ಥಾನದ ಆವರಣ ಬೈಪಾಸ್ ರೋಡ್, ಕೋಲಾರ ಬಬಲೇಶ್ವರ ರಸ್ತೆಯಿಂದ ಆಗಮಿಸುವವರಿಗೆ ಬಿದನೂರ ಪೆಟ್ರೋಲ್ ಬಂಕ್ ಹತ್ತಿರ, ತಿಕೋಟಾ ರಸ್ತೆಯಿಂದ ಆಗಮಿಸುವವರಿಗೆ ಸಿವಿಲ್ ಹಾಸ್ಪಿಟಲ್ ಕಂಪೊಂಡ್, ಹೊರ್ತಿ ರಸ್ತೆಯಿಂದ ಆಗಮಿಸುವವರಿಗೆ ಸೋಲಾಪುರ ಬೈಪಾಸ್ ರಸ್ತೆ ಹತ್ತಿರ, ಸಿಂದಗಿ ರಸ್ತೆಯಿಂದ ಆಗಮಿಸುವವರಿಗೆ ಮುನೀಶ್ವರ ಭಾಗದ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಈ ಹಣ್ಣು ತರಕಾರಿ ಮಾರಾಟ ಮಾಡಲು ತಾತ್ಕಾಲಿಲ ಸೆಟ್‌ಲೈಟ್ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗಿದೆ.

ಮಾರುಕಟ್ಟೆಗಳಲ್ಲಿ ರೈತರು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯೊಳಗಾಗಿ ಚಿಲ್ಲರೆ ವರ್ತಕರಿಗೆ ಮಾರಾಟ ಮಾಡಬೇಕು. ತಳ್ಳುಗಾಡಿಯ ಮಾರಾಟಗಾರರು ಇದನ್ನು ಖರೀದಿಸಿ ನಿಗದಿತ ಪ್ರದೇಶದಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಮಾರಾಟದ ಸಂದರ್ಬದಲ್ಲಿ ಗ್ರಾಹಕರ ಮಧ್ಯೆ ಅಂತರ ಕಾಯ್ದುಕೊಳ್ಳುವ ಮೂಲಕ ಒಬ್ಬೊಬ್ಬರಿಗೆ ಅವಕಾಶ ನೀಡಬೇಕು. ಈ ಕುರಿತು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಹಾಗೂ ಎ.ಪಿ.ಎಮ್.ಸಿ ಸಹಾಯಕ ನಿರ್ದೇಶಕರು ಮೇಲ್ವಿಚಾರಣೆ ಮಾಡಬೇಕು. ಅದರಂತೆ ಆರಕ್ಷಕ ಪೊಲೀಸ್ ಉಪ ಅಧೀಕ್ಷಕರು ತಾತ್ಕಾಲಿಕ ಮಾರಾಟ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಕೋವಿಡ್-19 ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಜನದಟ್ಟನೆಯಾಗದಂತೆ ಸಮಗ್ರ ಹಣ್ಣು-ತರಕಾರಿ ಮಾರಾಟವಾಗುವಂತೆ ವೀಚಕ್ಷಣಾ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅವರು ಆದೇಶ ನೀಡಿದ್ದಾರೆ.

error: Content is protected !!