ಕೋವಿಡ್-19 ನಿಯಂತ್ರಿಸಲು ತುರ್ತುಕ್ರಮ ಜಿಲ್ಲೆಯಾದ್ಯಂತ 144 ಜಾರಿ ಜಿಲ್ಲಾಧಿಕಾರಿ ಆದೇಶ

BI ಬಿಜಾಪುರ : ನೋವೆಲ್ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಇನ್ನು ಹೆಚ್ಚಿನ ಕ್ರಮಗಳನ್ನು ಜರುಗಿಸಬೇಕಾಗಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಸಮೀತಿ ಸಭೆಯ ನಿರ್ಣಯದಂತೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳಾದ ಕಲಬುರ್ಗಿ, ಧಾರವಾಡ, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಹಾಘೂ ಮಹಾರಾಷ್ಟç ರಾಜ್ಯದಲ್ಲಿ ಬಹಳಷ್ಟು ಕೋವಿಡ್-19 ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಲಾಲ್‌ಬಹುದ್ದುರ ಶಾತ್ರಿ ಮಾರುಕಟ್ಟೆ, ಮಾಲ್, ಬಜಾರ ಹಾಗೂ ಜನಸಂದಣಿ ಇರುವ ಪ್ರದೇಶ ಮತ್ತು ಮದುವೆ, ಜಾತ್ರೆ, ಸಂತೆ, ಉರುಸ್,ಉತ್ಸವ, ಶಾಪಿಂಗ್ ಮಾರ್ಟ, ಬಾರ್ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನುಇ ಹಮ್ಮಿಕೊಳ್ಳುವ ಪ್ರದೇಶಗಳಲ್ಲಿ ನಿಷೇದಾಜ್ಷೆಯನ್ನು ಜಿಲ್ಲೆಯಾದ್ಯಂತ ಜಾರಿಮಾಡಿ ಆದೇಶಿಸಿದ್ದಾರೆ.

ಈ ಅವಧಿಯಲ್ಲಿ 4ಕ್ಕಿಂತ ಹೆಚ್ಚಿನ ಜನರು ಗುಂಪು-ಗುಂಪಾಗಿ ಸೇರುವುದನ್ನು ನಿಷೇಧಿಸಿಲಾಗಿದೆ. ಹೋಟೇಲ್‌ಗಳಲ್ಲಿ ಕೇವಲ ಆಹಾರವನ್ನು ಕಟ್ಟಿಕೊಡುವ ಸೇವೆಗಳನ್ನು ಮಾತ್ರ ನೀಡಬೇಕು, ಈ ನಿಷೇದಾಜ್ಞೆಯನ್ನು ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ವಸ್ತುಗಳು, ವೈದ್ಯಕೀಯ ಸೇವೆ, ಹಾಲಿ-ತರಕಾರಿ, ಮಾಂಸ-ಮೀನು, ಕಿರಾಣಿ ಅಂಗಡಿ ಮತ್ತು ಪೇಟ್ರೋಲ್ ಪಂಪ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!