ಕೊರೊನಾ ವೈರಸ್ ತಡೆಗಟ್ಟಲು ಅತ್ಯಂತ ಬಿಗಿ ಕ್ರಮ ಕೈಕೊಳ್ಳಬೇಕು : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI ದೇವರಹಿಪ್ಪರಗಿ: ಕೊರೊನಾ ವೈರಸ್ ತಡೆಗಟ್ಟಲು ಅತ್ಯಂತ ಬಿಗಿ ಕ್ರಮ ಕೈಕೊಳ್ಳಬೇಕು. ಇನ್ನಷ್ಟು ಬದ್ರತೆ ಹೆಚ್ಚು ಮಾಡಿ ಯಾರೊಬ್ಬರು ಅನಾವಶ್ಯಕವಾಗಿ ಹೊರಗಡೆ ಸಂಚರಿದAತೆ ಕ್ರಮ ಕೈಕೊಂಡು ಕೊರೊನಾ ಮುಕ್ತ ಮಾಡಲು ಶ್ರಮಿಸಬೇಕು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೂಚಿಸಿದರು.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ಭಯಾನಕವಾಗಿರುವ ಈ ವೈರಸ್‌ನ್ನು ನಾವೆಲ್ಲ ಹೆಚ್ಚಿನ ಕಾಳಜಿ ವಿಹಿಸಿ ಹೋಗಲಾಡಿಸಬೇಕಾಗಿದೆ. ಆರೋಗ್ಯ ಇಲಾಖೆಯವರು ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಸೂಕ್ಷ ಪರಿಶೀಲನೆಯೊಂದಿಗೆ ಜಿಲ್ಲೆ ಹಾಗೂ ಅಂತರಾಜ್ಯದಿಂದ ಬಂದವರನ್ನು ಗುರುತಿಸಬೇಕು. ಗುರುತಿಸಿದವರನ್ನು ಏನು ಕ್ರಮ ಕೈಕೊಳ್ಳಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಬೇಕು. ಕೊರೊನಾ ಸಲುವಾಗಿ ಇಡೀ ದೇಶವೇ ಸ್ಥಬ್ದವಾಗಿದೆ. ಸಾರ್ವಜನಿಕರಿಗೆ ದಿನಸಿ ಹಾಗೂ ಔಷಧಿ ಬಿಟ್ಟು ಮತ್ಯಾವದಕ್ಕೂ ಅವಕಾಶ ಕೊಡಬಾರದು. ಅನಾವಶ್ಯಕ ಕಿರಿಕಿರಿ ಮಾಡುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಮಟಕಾ ಇಸ್ಪಿಟ್, ಅಕ್ರಮ ಮದ್ಯ ಮಾರಾಟ ನಿಲ್ಲಬೇಕು. ಕೊರೊನಾ ಹಾವಳಿ ಮುಗಿಯುವವರೆಗೆ ಗ್ರಾಮಲೆಕ್ಕಾಧಿಕಾರಿ, ಪಿಡಿಓಗಳು ಮೂಲಸ್ಥಾನ ಬಿಟ್ಟು ಹೋಗದಂತೆ ಸೂಚಿಸಬೇಕು.
ಇನ್ನು ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಕೊಳ್ಳಬೇಕು ಬೇಸಿಗೆಯಲ್ಲಿ ಒಂದಿಷ್ಟೂ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಅನುಕೂಲ ಮಾಡಿಕೊಡಬೇಕು. ಆರೋಗ್ಯ ಇಲಾಖೆಯ ಮೂಲಕ ತಹಸಿಲ್ದಾರ ತಾಪಂ ಇಓಗಳು ಜಾಗೃತಿ ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆಯ ಸಹಕಾರದಿಂದ ಜನನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೊರೊನಾ ಮುಂಜಾಗೃತೆ ಕೈಕೊಂಡ ಬಗ್ಗೆ ಬಸವನಬಾಗೇವಾಡಿ ಟಿಎಚ್‌ಓ ತಾಳಿಕೋಟಿ ಟಿಎಚ್‌ಓ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ದೇವರಹಿಪ್ಪರಗಿಗೆ ಖಾಯುಂ ವೈದ್ಯರಿಲ್ಲದೆ ತೊಂದರೆಯಾಗುತ್ತಿದ್ದು, ತಕ್ಷಣವೇ ಒದಗಿಸಬೇಕು ಎಂದು ಡಿ ಎಚ್ ಓ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಸಭೆಯಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ಎಂ ಎನ್ ಬಳಿಗಾರ, ದೇವರಹಿಪ್ಪರಗಿ ತಹಸೀಲ್ದಾರ ವೈ ಬಿ ನಾಗಠಾಣ, ತಾಳಿಕೋಟಿ ತಹಸೀಲ್ದಾರ ಅನೀಲಕುಮಾರ ಡವಳಗಿ, ಸಿಂದಗಿ ಮುದ್ದೇಬಿಹಾಳ ಹಾಗೂ ಬಾಗೇವಾಡಿ ತಾಪಂ ಇಓಗಳಾದ ಸುನೀಲ ಮದ್ದಿನ, ಭಾರತಿ ಚಲುವಯ್ಯ, ಶಶಿಕಾಂತ ಎಸ್ ಪಿಎಸೈ ರವಿ ಯಡವನ್ನವರ, ರೇಣುಕಾ ಹಳ್ಳಿ, ಎಲ್ ಡಿ ಮುಲ್ಲಾ, ಜೆ ವಿ ಕಿರಸೂರ, ಬಿ ಎಫ್ ಕಟಗೇರಿ, ಎಸ್ ಬಿ ಬಾಲಿ, ಜೆ ಪಿ ಶೆಟ್ಟಿ, ದಯಾನಂದ ಸಜ್ಜನ, ಡಾ. ಮಲ್ಲಿಕಾರ್ಜುನ ಬಿರಾದಾರ, ಎಸ್ ಎಚ್ ಮುದ್ದೇಬಿಹಾಳ, ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಂದ ಅಧಿಕಾರಿಗಳಿಗೆ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟಿಸರಿಯಿಂದ ಕೈ ಒರೆಸಿಕೊಂಡು ಹೋಗುವ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.

error: Content is protected !!