ಕೊರೊನಾ ವೈರಸ್ ತಡೆಗಟ್ಟಲು ಅತ್ಯಂತ ಬಿಗಿ ಕ್ರಮ ಕೈಕೊಳ್ಳಬೇಕು : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI :ದೇವರಹಿಪ್ಪರಗಿ: ಕೊರೊನಾ ವೈರಸ್ ತಡೆಗಟ್ಟಲು ಅತ್ಯಂತ ಬಿಗಿ ಕ್ರಮ ಕೈಕೊಳ್ಳಬೇಕು ಹೊರಗಿನಿಂದ ಬಂದವರಿಗೆಲ್ಲ ತಕ್ಷಣವೇ ಕೊರೊಂಟೈನ್ ವ್ಯವಸ್ಥೆ ಮಾಡಬೇಕು ಯಾವುದೇ ಕಾರಣಕ್ಕೂ ನೆಪ ಹೇಳದೆ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ಭಯಾನಕವಾಗಿರುವ ಈ ವೈರಸ್‌ನ್ನು ನಾವೆಲ್ಲ ಹೆಚ್ಚಿನ ಕಾಳಜಿ ವಿಹಿಸಿ ಹೋಗಲಾಡಿಸಬೇಕಾಗಿದೆ. ಆರೋಗ್ಯ ಇಲಾಖೆಯವರು ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಸೂಕ್ಷ ಪರಿಶೀಲನೆಯೊಂದಿಗೆ ಜಿಲ್ಲೆ ಹಾಗೂ ಅಂತರಾಜ್ಯದಿಂದ ಬಂದವರನ್ನು ಗುರುತಿಸಬೇಕು. ಕೊರೊನಾ ಸಲುವಾಗಿ ಇಡೀ ದೇಶವೇ ಸ್ಥಬ್ದವಾಗಿದೆ. ಸಾರ್ವಜನಿಕರಿಗೆ ದಿನಸಿ ಹಾಗೂ ಔಷಧಿ ಬಿಟ್ಟು ಮತ್ಯಾವದಕ್ಕೂ ಅವಕಾಶ ಕೊಡಬಾರದು. ಅನಾವಶ್ಯಕ ಕಿರಿಕಿರಿ ಮಾಡುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿಯೂ ಸಹ ಹೊರಗಡೆಯಿಂದ ಜನ ಬರುತ್ತಿದ್ದಾರೆ ಅವರಿಗೆ ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳನ್ನು ಬಳಸಿಕೊಂಡು ಸ್ಥಳಾವಕಾಶ ಮಾಡಿಕೊಡಬೇಕು. ಕೊರೊನಾ ಹಾವಳಿ ಮುಗಿಯುವವರೆಗೆ ಗ್ರಾಮಲೆಕ್ಕಾಧಿಕಾರಿ, ಪಿಡಿಓಗಳು, ಮೂಲಸ್ಥಾನ ಬಿಟ್ಟು ಹೋಗದಂತೆ ಸೂಚಿಸಬೇಕು.

ಇನ್ನು ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಕೊಳ್ಳಬೇಕು ಬೇಸಿಗೆಯಲ್ಲಿ ಒಂದಿಷ್ಟೂ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಅನುಕೂಲ ಮಾಡಿಕೊಡಬೇಕು. ಆರೋಗ್ಯ ಇಲಾಖೆಯ ಮೂಲಕ ತಹಸಿಲ್ದಾರ ತಾಪಂ ಇಓಗಳು ಜಾಗೃತಿ ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆಯ ಸಹಕಾರದಿಂದ ಜನ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೊರೊನಾ ಮುಂಜಾಗೃತೆ ಕೈಕೊಂಡ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ದೇವರಹಿಪ್ಪರಗಿ ತಹಸೀಲ್ದಾರ ವೈ ಬಿ ನಾಗಠಾಣ, ಸಿಪಿಐ ಕಾಂಬಳೆ,ಬಿಇಓ ಎನ್ ಎಚ್ ನಗನೂರ,ಪ್ರಭಾರಿ ಪಿಎಸೈ ಸುರೇಶ ಗಡ್ಡಿ, ಕಲಕೇರಿ ಪಿಎಸೈ ರೇಣುಕಾ ಹಳ್ಳಿ, ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ, ಸೇರಿದಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪೊಲೀಸ್ ಇಲಾಖೆ,ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಂದ ಅಧಿಕಾರಿಗಳಿಗೆ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟಿಸರಿಯಿಂದ ಕೈ ಒರೆಸಿಕೊಂಡು ಹೋಗುವ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.

error: Content is protected !!