ಕೊರಂಟೈನಲ್ಲಿರುವ ಮಕ್ಕಳಿಗೆ ಹಾಲು, ಬಿಸ್ಕತ್ತ ವಿತರಣೆ

BI ಕಲಕೇರಿ : ಕಲಕೇರಿಯಿಂದ ರಾಜ್ಯದ ವಿವಿದೆಡೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ದುಡಿಯಲು ಹೊದಂತಹ ಕಾರ್ಮಿಕರು ಕರೋನಾ ಮಹಾಮಾರಿಯಿಂದ ಅನೇಕ ಸಂಕಷ್ಟಗಳನ್ನು ಎದುರಿಸಿ ತಮ್ಮ ಸ್ವಗ್ರಾಮಕ್ಕೆ ಬರಲು ಹರಸಾಹಸ ಪಟ್ಟು ಆಗಮಿಸಿ ಕಲಕೇರಿಯ ವಿವಿಧ ಶಾಲೆಗಳಲ್ಲಿ ಕೊರಂಟೈನಗೊಳಗಾದ ಸುಮಾರು 257 ಕುಟುಂಬಗಳಲ್ಲಿ ಇರುವ ಪುಟ್ಟ ಮಕ್ಕಳಿಗೆ ಹಾಲು, ಬಿಸ್ಕತ್ ಸೇರಿದಂತೆ ದಿನಸಿಯನ್ನು ಮುದ್ದೇಬಿಹಾಳ ಶಾಸಕರಾದ ಎ.ಎಸ್. ಪಾಟೀಲ (ನಡಹಳ್ಳಿ) ವಿತರಿಸಿದರು.

ನನ್ನ ಮಕ್ಕಳು ತಮ್ಮ ಖರ್ಚಿನಿಂದ ಇಲ್ಲಿಯವರೆಗೆ ಉಳಿತಾಯ ಮಾಡಿದ ಸುಮಾರು 12 ಲಕ್ಷ ರೂಪಾಯಿಗಳನ್ನು ಕರೋನಾದಿಂದ ಇಡೀ ವಿಶ್ವವನ್ನೆ ಬೆಚ್ಚಿ ಬಿಳಿಸಿದನ್ನು ಮಾಧ್ಯಮದಲ್ಲಿ ಗಮನಿಸಿದ ನನ್ನ ಮಗ ಭರತನ ಆಶಯದಂತೆ ಕೊರಂಟೈನಗೊಳಗಾದ ಕಾರ್ಮಿಕರಲ್ಲಿ ಮಕ್ಕಳು ಹಾಲು ಇಲ್ಲದೇ ಕಷ್ಟಪಡುವುದನ್ನ ಅರಿತು, ಎಲ್ಲ ಮಕ್ಕಳಿಗೆ ಗೂಡ್‌ಲೈಫ್ ಟೆಟ್ರಾಪ್ಯಾಕ್ ಹಾಲು, ಇದು ಉಳಿದ ಹಾಲುಗಳಿಗಿಂತ ದುಭಾರಿ ಹಾಗೂ ಸುಮಾರು 3 ತಿಂಗಳು ಕೆಡದಂತೆ ಸಂರಕ್ಷಿರುತ್ತಾರೆ, ಒಂದು ಮಗುವಿಗೆ ಒಂದು ಬಾಕ್ಸ ಹಾಲು, ಅಂದರೆ ದಿನಕ್ಕೆ ಎರಡರಂತೆ 15 ದಿನಗಳಿಗಾಗುವಷ್ಟು ಹಾಲು, ಒಳ್ಳೆಯ ಬಿಸ್ಕತ್ತ, ಹಾಗೂ ತಿಂಗಳಿಗಾಗುವಷ್ಟು ದಿನಸಿ ಸಮೇತವಾಗಿ ವಿತರಿಸಿದರು.

ಇಲ್ಲಿಯವರೆಗೆ ಸುಮಾರು 3 ಕೋಟಿ ಮೌಲ್ಯದ ದಿನಸಿಯನ್ನು ವೈಯಕ್ತಕವಾಗಿ ಹಂಚಲಾಗಿದೆ, ನಿವೆಲ್ಲ ವಿಜಯಪುರದ ಗಟ್ಟಿ ಜನಗಳು, ದಿನವೂ ದುಡಿದು ತಿನ್ನುವ ಮಂದಿ, ನಿಮಗೆ ಖಂಡಿತವಾಗಿ ಕರೋನಾ ಬರಲ್ಲ ಎಂದು ಎಲ್ಲರಿಗೆ ಧೈರ್ಯ ತುಂಬಿದರು, ಸಿದ್ದಗಂಗಾ ಶ್ರೀಗಳ ಉಪದೇಶದಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡು ಖಂಡಿತವಾಗಿ ನಿನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತೆ ಅನ್ನೊ ಆರ್ಶಿವಾದದಂತೆ ನಮ್ಮ ಮನೆಯಲ್ಲಿ ನಿತ್ಯವೂ ಬಡವರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

ಈ ಸಂದರ್ಭದಲ್ಲಿ ಸಾಹೇಬಗೌಡ ಪಾಟೀಲ(ವಣಿಕಿಹಾಳ), ಡಾ|| ಎಂ.ಎಂ.ಬಿರಾದಾರ, ಶಿವಶಂಕರ ಸಜ್ಜನ. ಮೈಮೂಬ ಕೆಂಭಾವಿ, ಮೈನುದ್ದಿನ ಮಣಿಯಾರ ,ಜೈಭೀಮ ಹೊಸಮನಿ, ಸೋಮು ಬಡಿಗೇರ, ಅಶೋಕ ರಾಠೋಡ ಸೇರಿದಂತೆ, ವೈಧ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

error: Content is protected !!