ಕೇಂದ್ರ ಬಜೆಟ್- ಎಂ.ಬಿ.ಪಾಟೀಲ್ ಪ್ರತಿಕ್ರಿಯೆ

BI ಬಿಜಾಪುರ : ಆರ್ಥಿಕ ತಜ್ಞ ಡಾ.ಮನಮೋಹನ ಸಿಂಗ್ ಹಣಕಾಸು ಮಂತ್ರಿ, ಪ್ರಧಾನಿ ಆಗಿದ್ದಾಗ ರೂಪಿಸಿದ್ದ ಭಾರತ ಬಲಿಷ್ಠ ಆರ್ಥಿಕ ವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿಯವರ 6ವರ್ಷಗಳ ಅಧಿಕಾರದಲ್ಲಿ ಸಂಪೂರ್ಣ ಬಿಗಡಾಯಿಸಿ, ದೇಶ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ ಎಂಬುದಕ್ಕೆ ಇಂದಿನ ಬಜೆಟ್ ತೋರಿಸಿಕೊಟ್ಟಿದೆ.
ಭಾರತೀಯ ಜೀವವಿಮಾ ನಿಗಮ ನಮ್ಮ ದೇಶದ ಅತ್ಯಂತ ಸದೃಢ ಸಂಸ್ಥೆಯಾಗಿತ್ತು. ಅನೇಕ ರಾಜ್ಯಗಳಿಗೆ, ದೇಶದ ಪ್ರಮುಖ ಯೋಜನೆಗಳಿಗೆ ಸಾಲ ನೀಡಿದ್ದ ಅಂತಹ ಬಲಿಷ್ಠ ಸಂಸ್ಥೆಯ ಶೇರುಗಳನ್ನು ಇಂದು ಮಾರಾಟ ಮಾಡಲು ಹೊರಟಿರುವದು ದೇಶದ ಆರ್ಥಿಕ ದುಸ್ಥಿತಿಯ ಪ್ರತೀಕವಾಗಿದೆ.
ಯೂರೋಪ, ಅಮೇರಿಕಾ ಸೇರಿದಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಹಿಂಜರಿಕೆ ಅನುಭವಿಸಿದ್ದರೂ ಮನಮೋಹನ ಸಿಂಗ್‌ರ ಕಾಲದಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇಂದು ಜಿಡಿಪಿ ಶೇ.3.5ಗೆ ಕುಸಿದಿದೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಯುವಕರಿಗೆ ಅಚ್ಚೇದಿನ್ ಬರಲೇ ಇಲ್ಲ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುದಾನ ಕಡಿತ ಮಾಡಿದ್ದಾರೆ. ಇದರಿಂದ ಇಡೀ ದೇಶದಲ್ಲಿಯೇ ಗ್ರಾಮ ಪಂಚಾಯತಗಳು ದುರ್ಬಲವಾಗಲಿವೆ.
ನೀರಾವರಿಗೆ ಸಂಬಂಧಿಸಿದಂತ್ತೆ ಎಐಬಿಪಿ ಯೋಜನೆಯ ಕುರಿತು ಈ ಬಜೆಟ್‌ನಲ್ಲಿ ಪ್ರಸ್ತಾಪವೆ ಇಲ್ಲ. ಇದರಿಂದ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗೆ(ಆಲಮಟ್ಟಿ) ಹಿನ್ನಡೆಯಾಗಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಇಂದಿನ ಬಜೆಟ್ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

error: Content is protected !!