ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಸ್ತವ ಸ್ಥಿತಿ ಅರಿತು ಮಾತನಾಡಲಿ : ಮಾಜಿ ಸಚಿವ ಎಂ.ಬಿ.ಪಾಟೀಲ್

BI ಬಿಜಾಪುರ : ವಿಜಯಪುರ – ಬಾಗಲಕೋಟ ಜಿಲ್ಲೆಗಳಲ್ಲಿ ಸಾಕಷ್ಟು ಕೋಲ್ಡ್ ಸ್ಟೋರೆಜ್‍ಗಳು ಇದ್ದು, ರೈತರು ತಾವು ಬೆಳೆದ ಟೊಮ್ಯಾಟೊ, ಕಲ್ಲಂಗಡಿ ಇತರೆ ಹಣ್ಣು-ಹಂಪಲಗಳನ್ನು ಅಲ್ಲಿ ಇರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲರ ಹೇಳಿಕೆ ವಾಸ್ತವ ಸಂಗತಿಗಳಿಗೆ ದೂರವಾಗಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ವಿಜಯಪುರ-ಬಾಗಲಕೋಟ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಹೇರಳವಾಗಿ ಬೆಳೆಯುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರಿಗೆ ಅತೀವ ತೊಂದರೆ ಉಂಟಾಗಿದೆ. ಕೇವಲ ವಿಜಯಪುರ ಜಿಲ್ಲೆಯನ್ನು ಉದಾಹರಿಸುವದಾದರೆ ಸರಕಾರಿ, ಸಹಕಾರಿ ಹಾಗೂ ಖಾಸಗಿ ಮಾಲಿಕತ್ವದ ಎಲ್ಲ ಕೋಲ್ಡ್ ಸ್ಟೋರೆಜ್ ಗಳ ಒಟ್ಟು ಸಾಮರ್ಥ್ಯ 40ಸಾವಿರ ಟನ್ ಆಗಿದೆ. ಆದರೆ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ 80ಸಾವಿರ ಟನ್ ಕೇವಲ ಒಣದ್ರಾಕ್ಷಿ ಉತ್ಪಾದನೆ ಆಗಿದೆ. ಹಾಗಿದ್ದಾಗ ಉಳಿದ 40ಸಾವಿರ ಟನ್ ಒಣದ್ರಾಕ್ಷಿಯನ್ನು ಎಲ್ಲಿ ಇಡುವದು? ನೆರೆಯ ರಾಜ್ಯಗಳ ಕೋಲ್ಡ್ ಸ್ಟೋರೆಜ್‍ಗಳನ್ನು ಹಿಂದಿನಂತೆ ಈ ವರ್ಷವೂ ಅವಲಂಬಿಸಲೇಬೇಕಿದೆ. ಇದು ರೈತರಿಗೆ ಅತೀ ಹೆಚ್ಚು ಆದಾಯ ತರುವ ಒಣ ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿ ಹೀಗಿದೆ. ಇದಲ್ಲದೆ ಉಳಿದ ಕಲ್ಲಂಗಡಿ, ಕರಬೂಜ, ಪಪ್ಪಾಯ ಸೇರಿದಂತೆ ವಿವಿಧ ಹಣ್ಣು-ಹಂಪಲಗಳ, ತರಕಾರಿ ಬೆಳೆಗಾರರ ಸ್ಥಿತಿ ಅಧೋಗತಿಯಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಅನುಸರಿಸಿದ ಅವೈಜ್ಞಾನಿಕ ಕ್ರಮಗಳಿಂದಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗಿ, ರೈತರಿಗೆ ಅತೀ ಹೆಚ್ಚು ಹಾನಿಯಾಗುತ್ತಿದೆ. ಈ ಕುರಿತು ಪರಿಹಾರ ಸೂಚಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷಿ ಸಚಿವರು ವಸ್ತುಸ್ಥಿತಿಯನ್ನು ಅರಿತುಕೊಂಡು, ಸಂಕಷ್ಟದಲ್ಲಿರುವ ರೈತರ ಕಣ್ಣಿರು ಒರೆಸುವ ಕಾರ್ಯವನ್ನು ಮಾಡಲಿ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

error: Content is protected !!