ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

BI ಬಿಜಾಪುರ : ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೃಷ್ಣಾ ನದಿಯ ಮೂಲದ ಮುಖ್ಯ ಕೊಳವೆ ಮಾರ್ಗದಲ್ಲಿ ಓವರ ಬ್ರಿಡ್ಜ್ ಹತ್ತಿರ 2 ಸ್ಥಳಗಳಲ್ಲಿ ಕೊಳವೆ ಮಾರ್ಗದಲ್ಲಿ ಸೋರುವಿಕೆ ಉಂಟಾಗಿರುವುದರಿಂದ ದುರಸ್ತಿ ಕಾಮಗಾರಿಯನ್ನು ದಿನಾಂಕ 9-1-2020 ರಂದು ಕೈಗೊಳ್ಳಲಾಗುತ್ತಿದೆ. ಆದ್ದರಿಂದ ದಿನಾಂಕ 9-1-2020 ರಂದು ನೀರು ಸರಬರಾಜುವಾಗುವ ಬಡಾವಣೆಗಳಿಗೆ ದಿನಾಂಕ 10-1-2020 ಮತ್ತು 11-1-2020 ರಂದು ನೀರು ಸರಬರಾಜು ಮಾಡಲಾಗುವುದು.
ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ನೀರು ಸರಬರಾಜು ಮತ್ತು ಒಳ ಚರಂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!