ಕಾ ನಿ ಪಾ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಉರ್ದು ಪತ್ರಕರ್ತರಾದ ಲಾಡ್ಲೇಮಶಾಕ ನಧಾಫ್ ಆಯ್ಕೆ

BI ಮುದ್ದೇಬಿಹಾಳ: ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.28 ರವಿವಾರದಂದು ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಪ್ರಧಾನ ಮಾಡಿರುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮುದ್ದೇಬಿಹಾಳ ತಾಲೂಕಾ ಘಟಕದಿಂದ ಉರ್ದು ಸಾಲಾರ್ ದಿನಪತ್ರಿಕೆ ವರದಿಗಾರ ಲಾಡ್ಲೇಮಶಾಕ ನದಾಫ್ ಅವರನ್ನು ಸಂಘದ ಸರ್ವ ಸದಸ್ಯರು ಆಯ್ಕೆ ಮಾಡಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ತಾಲೂಕಾ ಕಾನಿಪ ಸಂಘದ ಅಧ್ಯಕ್ಷ ಅಮೀನಸಾಬ ಮುಲ್ಲಾ ಅವರ ನೇತೃತ್ವದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಈ ತಿರ್ಮಾಣಕ್ಕೆ ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿದರು.

ಜುಲೈ.28 ರವವಾರದಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಜಿಲ್ಲಾ ಪಂಚಾಯತ ಹತ್ತಿರದ ನೂತನ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ, ಉಪನ್ಯಾಸ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ. ಜಿಲ್ಲಾಧಿಕಾರಿ ವಾಯ್.ಎಸ್.ಪಾಟೀಲ ಸಮಾರಂಭವನ್ನು ಉದ್ಘಾಟಿಸುವರು. ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಇಭಾಗದ ಮುಖ್ಯಸ್ಥ ಪ್ರೊ.ಡಾ.ಓಂಕಾರ ಕಾಕಡೆ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ತಾಲೂಕಾಧ್ಯಕ್ಷ ಅಮೀನಸಾಬ ಮುಲ್ಲಾ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಗುರುನಾಥ ಕತ್ತಿ, ಮುತ್ತು ವಡವಡಗಿ, ಶಿವುಕುಮಾರ ಶಾರದಳ್ಳಿ, ಪರಶುರಾಮ ಕೊಣ್ಣೂರ, ಸಿದ್ದು ಚಲವಾದಿ, ಬಂದೆನವಾಜ ಕುಮಸಿ, ರಾಜಶೇಖರ ಸಜ್ಜನ, ಚೇತನ ಕೆಂದೂಳಿ, ರಿಯಾಜ ಮುಲ್ಲಾ, ಸಂತೋಷ ಶಹಾಪೂರ ಇದ್ದರು.

error: Content is protected !!