ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಜನವರಿ 15ರ ವರೆಗೆ ಕಾಲಾವಕಾಶ

BI ಬಿಜಾಪುರ : ಭಾರತ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ 2020ರ ಜನವರಿ 1ಕ್ಕೆ ಇದ್ದಂತೆ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಿ ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದ್ದಾರೆ. ದಿನಾಂಕ: 01-01-2020ಕ್ಕೆ ಇದ್ದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರನ್ವಯ ಕರಡು ಮತದಾರರ ಪಟ್ಟಿ ಇಂದು ಪ್ರಕಟಿಸಲಾಗಿದೆ.
ಮತದಾರ ಪಟ್ಟಿಯಲ್ಲಿನ ವಿವಿಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 2020ರ ಜನವರಿ 15ರವರೆಗೆ
ಕಾಲಾವಕಾಶ ನೀಡಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳಿಗೆ ವಿಲೇವಾರಿ ಮಾಡಲು ಜನವರಿ 27 ನಿಗದಿಪಡಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು 2020ರ ಫೆಬ್ರುವರಿ 7 ರಂದು ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 927455 ಪುರುಷ ಮತದಾರರು ಹಾಗೂ 884398 ಮಹಿಳಾ ಮತದಾರರು, 260 ಇತರೆ ಮತದಾರರನ್ನೊಳಗೊಂಡು ಒಟ್ಟು 1812113 ಮತದಾರರಿದ್ದಾರೆ.
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 104746 ಪುರುಷ, 100120 ಮಹಿಳಾ ಹಾಗೂ 34 ಇತರೆ ಸೇರಿದಂತೆ 204900 ಮತದಾರರಿದ್ದಾರೆ.
ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 108267 ಪುರುಷ, 101234 ಮಹಿಳಾ ಹಾಗೂ 19 ಇತರೆಮತದಾರರು ಸೇರಿದಂತೆ 209520 ಮತದಾರರಿದ್ದಾರೆ.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 103492 ಪುರುಷ, 98078 ಮಹಿಳಾ ಹಾಗೂ 18 ಇತರೆ ಮತದಾರರು ಸೇರಿದಂತೆ ಒಟ್ಟು 201588 ಮತದಾರರಿದ್ದಾರೆ.
ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 105018 ಪುರುಷ, 100596 ಮಹಿಳಾ ಹಾಗೂ 12ಇತರೆ ಮತದಾರರು ಸೇರಿದಂತೆ ಒಟ್ಟು 205626 ಮತದಾರರಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರದಲ್ಲಿ 121763 ಪುರುಷ, 120212 ಮಹಿಳಾ ಹಾಗೂ 78 ಇತರೆ ಸೇರಿದಂತೆ ಒಟ್ಟು 242053 ಮತದಾರರಿದ್ದಾರೆ.
ನಾಗಠಾಣ ಮತಕ್ಷೇತ್ರದಲ್ಲಿ 131136ಪುರುಷ, 122663ಮಹಿಳಾ ಹಾಗೂ 30ಇತರೆ ಮತದಾರರು
ಸೇರಿದಂತೆ ಒಟ್ಟು 253829 ಮತದಾರರಿದ್ದಾರೆ.
ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 120282 ಪುರುಷ, 111670 ಮಹಿಳಾ ಹಾಗೂ 23 ಇತರೆ ಮತದಾರರು ಸೇರಿದಂತೆ 231975 ಮತದಾರರಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ 116963 ಪುರುಷ, 109357 ಮಹಿಳಾ ಹಾಗೂ 28 ಇತರೆ ಮತದಾರರು ಸೇರಿದಂತೆ 226348 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 911667 ಪುರುಷ, 863930 ಮಹಿಳಾ ಹಾಗೂ 242 ಇತರೆ ಸೇರಿದಂತೆ 17,75, 839 ಮತದಾರರಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕರಡು ಮತದಾರರ ಪಟ್ಟಿಯನ್ವಯ ಒಟ್ಟು36274ಮತದಾರರು ಸೇರ್ಪಡೆಯಾಗಿದ್ದಾರೆ. ಕರಡು ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿ 2020ರ ಜನವರಿ 1ಕ್ಕೆ 18 ವರ್ಷ ತುಂಬುವವರು ಹಾಗೂ ಇನ್ನುಳಿದ, ಬಿಟ್ಟು ಹೋದ ಮತದಾರರ ಸೇರ್ಪಡೆ, ತೆಗೆದು ಹಾಕುವಿಕೆ,ತಿದ್ದುಪಡಿ ಮಾಡಲು ಮತ್ತು ಒಂದೇ ವಿಧಾನಸಭಾ ಮತಕ್ಷೇತ್ರದಲ್ಲಿ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆಗಾಗಿ ಜನವರಿ 15ರವರೆಗೆ ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿ ಪ್ರಕಟಿಸಿದ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಇಂದು ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರು, ಆಯಾ ಪಕ್ಷಗಳ ಪ್ರತಿನಿಧಿಗಳು ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ ಸಹಕಾರಿಯಾಗಲು ಪ್ರತಿ ವಿಧಾನಸಭಾ ಮತಕ್ಷೇತ್ರದ ಪ್ರತಿ ಮತಗಟ್ಟೆಗೆ ಓರ್ವ ಬಿಎಲ್‌ಎಗಳನ್ನು ನೇಮಕ ಮಾಡಬೇಕು. ನೇಮಕ ಮಾಡಿದ ಬಗ್ಗೆ, ಪ್ರತಿ ಪಟ್ಟಿ- ಯಾದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಆಯಾ ವಿಧಾನಸಭಾ ಮತಕ್ಷೇತ್ರಗಳ ತಹಶೀಲ್ದಾರರಿಗೆ ಸಲ್ಲಿಸಲು ಕೋರಲಾಗಿದೆ.
ಅದರಂತೆ ಮತದಾರರ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಯುವ ಮತದಾರರು ಸೇರ್ಪಡೆಯಾಗಲು ಅನುಕೂಲವಾಗುವಂತೆ ಆಯಾ ವಿಧಾನಸಭಾವಾರು ಪದವಿಪೂರ್ವ ಹಾಗೂ ಪದವಿ ಕಾಲೇಜ್‌ಗಳ ಪ್ರಾಚಾರ್ಯರೊಂದಿಗೆ ಸಭೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚು ಮತದಾರರನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು. ತಾಲೂಕಿಗೆ ಒಬ್ಬರಂತೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಈ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಜೊತೆಗೆ ಪ್ರತಿವಾರ ಈ ಕುರಿತಂತೆ ಪರಿಶೀಲನೆ ಸಹ ನಡೆಸಿ, ಕ್ರಮ ವಹಿಸುವುದಾಗಿ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಮತಗಟ್ಟೆಗೆ ಓರ್ವ ಬಿಎಲ್‌ಎ ನೇಮಿಸುವಂತೆ ಕೋರಲಾಗಿದೆ. ಅದರನ್ವಯ ಬಬಲೇಶ್ವರ, ವಿಜಯಪುರ ಹಾಗೂ ಇಂಡಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು 794 ಬಿಎಲ್‌ಎಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದಿಂದ 29 ಹಾಗೂ ಜೆಡಿಎಸ್ ಪಕ್ಷದಿಂದ 269 ಬಿಎಲ್‌ಎಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯ ಒಟ್ಟು 2101 ಮತಗಟ್ಟೆಗಳಲ್ಲಿ ಬಿಎಲ್‌ಎಗಳನ್ನು
ನೇಮಿಸುವಂತೆ ಕೋರಲಾಗಿದೆ.

ಮತದಾರರ ಪರಿಶೀಲನೆ ಕಾರ್ಯಕ್ರಮದ ಅಂಗವಾಗಿ (ಇಲೆಕ್ರ‍್ಸ್ ವೇರಿಫೇಕೇಶನ್ ಪ್ರೊಗ್ರಾಮ) ಅಂಗವಾಗಿ 1766890 ಮತದಾರರು, ಮತಗಟ್ಟೆ ಮಟ್ಟದ ಅಧಿಕಾರಿ ಮತ್ತು ನಾಗರಿಕ ಸೇವಾ ಕೇಂದ್ರಗಳ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. 2019ರ ಜನವರಿ 1ಕ್ಕೆ 911667 ಪುರುಷ, 863930 ಮಹಿಳಾ ಹಾಗೂ 242 ಇತರೆ ಮತದಾರರು ಸೇರಿದಂತೆ ಒಟ್ಟು 1775839 ಮತದಾರರಿದ್ದರು. ಈಗ ಮತದಾರರ ಪರಿಶೀಲನೆ ನಂತರ ಕರಡು ಮತದಾರರ ಪಟ್ಟಿಯಲ್ಲಿ 1812113 ಮತದಾರರಿದ್ದಾರೆಎಂದು ಅವರು ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಚಂದ್ರಕಾಂತ್ ಹಿರೇಮಠ, ಇರಫಾನ್ ಶೇಖ, ಚನ್ನಬಸಪ್ಪ ನಂದರಗಿ ಉಪಸ್ಥಿತರಿದ್ದರು.

error: Content is protected !!