ಕನ್ನಡದ ಕಟ್ಟಾಳು ಪಾಪು ಇನ್ನಿಲ್ಲ

BI ಬಿಜಾಪುರ : ಅನುಭವಿ ಪತ್ರಕರ್ತ ನೇರ ನುಡಿಯ, ಕನ್ನಡದ ದಿಟ್ಟ ಹೋರಾಟಗಾರ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷ, ಬೆಳಗಾವಿಯಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಕನ್ನಡದ ಬಹುಸಂಖ್ಯಾತ ಪ್ರದೇಶವನ್ನು ಒಂದುಗೂಡಿಸಿದ ಹರಿಕಾರ ನಮ್ಮಿಂದ ದೂರವಾದರೆಂದು ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಸಂತಾಪ ವ್ಯಕ್ತಪಡಿಸಿದರು.

ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಏರ್ಪಡಿಸಿದ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು ಅವರೊಂದಿಗೆ ಒಡನಾಟದ ಕುರಿತು ತಮ್ಮ ಬಾಲ್ಯ ಜೀವನದಲ್ಲಿ ಅವರ ಭೇಟಿಯಾದದ್ದು, ವಿಜಯಪುರದೊಂದಿಗೆ ಇದ್ದ ಆಸಕ್ತಿ ಬಗ್ಗೆ ವಿವರಿಸಿದರು.

ಶಿಕ್ಷಣ, ನೀರಾವರಿ, ಕನ್ನಡ, ಸಾಮಾಜಿಕ ಕಳಕಳಿ ಮತ್ತು ವಿಜಯಪುರದ ಬಗ್ಗೆ ಹೊಂದಿರುವ ಅಭಿಮಾನ ನಮ್ಮೆಲ್ಲರಿಗೆ ಸ್ಫೂರ್ತಿಯನ್ನು ನೀಡುತ್ತಿತ್ತೆಂದು ಹಿರಿಯ ಸಂಶೋಧಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಅನುಭವ ತಿಳಿಸಿದರು.

ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಮುಂತಾದ ಕ್ಷೇತ್ರಗಳಲ್ಲಿ ಸಮಸ್ಯೆಗಳು ಕಂಡುಬಂದಾಗ ಪರಿಹರಿಸುವ ಸಾಮಥ್ರ್ಯ ಅವರಲ್ಲಿತ್ತೆಂದು ವಿ.ಸಿ.ನಾಗಠಾಣ ಅವರು ಕೊಂಡಾಡಿದರು.

ಈ ಸಂದರ್ಭದಲ್ಲಿ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ, ಸಂಯೋಜನಾಧಿಕಾರಿ ಡಾ. ವಿ.ಡಿ.ಐಹೊಳ್ಳಿ, ಪ್ರೊ. ಎ.ಬಿ.ಬೂದಿಹಾಳ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಪ್ರೊ. ಬಿ.ಬಿ.ಡೆಂಗನವರ, ಪ್ರಾ. ಸಂಗಮೇಶ ಮೇತ್ರಿ, ದೊಡ್ಡಣ್ಣ ಬಜಂತ್ರಿ, ಡಾ. ಡಿ.ಆರ್.ನಿಡೋಣಿ, ಆಡಳಿತಾಧಿಕಾರಿ ಆಯ್.ಎಸ್.ಕಾಳಪ್ಪನವರ, ಎಸ್.ಕೆ.ಕನ್ನಾಳ, ಡಾ. ಉಷಾ ಹಿರೇಮಠ, ಶ್ರೀಕಾಂತ ಗುಲಗಂಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!