ಕಡ್ಲೇವಾಡ ಪಿಸಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

BI ದೇವರಹಿಪ್ಪರಗಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಹಳ್ಳಿಗಳು ಅಭಿವೃದ್ಧಿ ಹೊಂದಲಿದ್ದು, ಪ್ರಥಮಾಧ್ಯತೆಯಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಕೈಕೊಳ್ಳಲಾಗಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

ಸೋಮವಾರ ತಾಲೂಕಿನ ಕಡ್ಲೇವಾಡ ಪಿಸಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆ ವತಿಯಿಂದ ಗಿರಿಜನ ಉಪ ಯೊಜನೆಯಡಿಯಲ್ಲಿ ಎಸ್ ಟಿ ಕಾಲನಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಕೈಕೊಳ್ಳಲಾದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅವಶ್ಯಕತೆ ಬಹಳಷ್ಟಿದೆ. ಹೀಗಾಗಿ ವಿವಿಧ ಇಲಾಖೆಗಳ ಸಚಿವರನ್ನು ಕಂಡು ಮನವಿ ಮಾಡಿ ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ. ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ರಸ್ತೆಗಳ ಸುಧಾರಣೆಯಿಂದ ರೈತರು, ಸಾರ್ವಜನಿಕರಿಗೆ ಅತ್ಯಂತ ಅನುಕೂಲವಾಗಲಿದೆ. ಹಂತ ಹಂತವಾಗಿ ಪ್ರತಿಯೊಂದು ಗ್ರಾಮದ ರಸ್ತೆಗಳನ್ನು ಸುಧಾರಿಸಿ ಅನುಕೂಲ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಗ್ರಾಮೀಣ ಭಾಗಕ್ಕೆ ಎರಡರಿಂದ ಮೂರು ಕೋಟಿ ರೂ. ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರು ಗುಣಮಟ್ಟದ ಹಾಗೂ ಉತ್ತಮ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮುಖಂಡರಾದ ಶಂಕರಗೌಡ ಕೋಟಿಖಾನಿ ಹಾಗೂ ರಮೇಶ ಮಸಬಿನಾಳ ಕಳೆದ ಹತ್ತು ವರ್ಷಗಳಿಂದ ನಮ್ಮ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಈಗ ನಮ್ಮ ಕ್ಷೇತ್ರಕ್ಕೆ ಶುಕ್ರದೆಶೆ ಪ್ರಾರಂಭವಾಗಿದೆ. ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಪ್ರತಿಯೊಂದು ರಸ್ತೆಗಳು ನಿರ್ಮಾಣವಾಗಲಿವೆ. ಇಂತಹ ಶಾಸಕರು ಸಿಕ್ಕಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲ ಸಹಕಾರ ಕೊಟ್ಟು ಕ್ಷೇತ್ರದ ಪ್ರಗತಿಗೆ ನಾಂದಿ ಹಾಡೋಣ ಎಂದರು.

ಸಮಾರಂಭದ ಸಾನಿಧ್ಯವನ್ನು ಮುಳಸಾವಳಗಿಯ ನಿಂಗರಾಯ ಮಹಾರಾಜರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೋಕೊಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ ಎಸ್ ನಿಡೋಣಿ, ಕಿರಿಯ ಅಭಿಯಂತರರು ಜಿ ಬಿ ಕರ್ನಾಳ,ಗಣ್ಯರಾದ ಅಣ್ಣುಗೌಡ, ಪಾಟೀಲ, ಸಿದ್ಸದನಗೌಡ ಪಾಟೀಲ, ಅಶೋಕಸಾಹುಕಾರ ಸುಳಿಬಾವಿ, ಅಣ್ಣುಗೌಡ ಬಿರಾದಾರ ದಿಂಡವಾರ, ಶರಣು ದಳವಾಯಿ, ವಿಶ್ವನಾಥ ಚಂಡಕಿ, ಚಂದ್ರಶೇಖರ ಗಣಜಲಿ, ಜವಾಹರ ದೇಶಪಾಂಡೆ, ಗುರುರಾಜ ಬಾಗಲಕೋಟ, ಮಹಾಂತೇಶ ವಂದಾಲ, ರಾಜು ಮೆಟಗಾರ, ಸಿದ್ದಪ್ಪ ಗಣಜಲಿ, ಬಸವರಾಜ ಕಲ್ಲೂರ, ಶ್ರೀಮಂತ ಅಕ್ಕಲಕೋಟ, ಗಣೇಶ ಪಾಟೀಲ, ಸಿದ್ದಾರ್ಥ ಮುಳಸಾವಳಗಿ ಸೇರಿದಂತೆ ಸುತ್ತಮುತ್ತಲಿನ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!