ಎ.01 ರಿಂದ ಭಾರತ್ ಸ್ಟೇಜ-4 ಮಾಪನದ ಮಾರಾಟ ಹಾಗೂ ನೋಂದಣಿ ಸ್ಥಗಿತ, ಭಾರತ್ ಸ್ಟೇಜ್-6 ವಾಹನಗಳ ನೋಂದಣಿ ಪ್ರಾರಂಭ

BI ಬಿಜಾಪುರ : ಮೋಟಾರು ವಾಹನಗಳ ನಿಯಮಗಳ ಪ್ರಕಾರ 1989ರ ನಿಯಮ 115 ಉಪ ನಿಯಮ 21ನ್ನು ಸೇರ್ಪಡೆಮಾಡಿದ್ದು ಅದರಂತೆ ಮೋಟಾರು ವಾಹನಗಳ ನಿಯಮಗಳ ಪ್ರಕಾರ 01-04-2020 ರಿಂದ ಭಾರತ್ ಸ್ಟೇಜ-4 ಮಾಪನದ ಮಾರಾಟ ಹಾಗೂ ನೋಂದಣಿ ಸ್ಥಗಿತಗೊಳ್ಳಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
31-03-2020ರ ಒಳಗಾಗಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ತಾತ್ಕಾಲಿಕ ನೋಂದಣಿ ಸಂಖ್ಯೆಯ ಮೇಲೆ ವಾಹನ ಖರೀದಿ ಮಾಡಿದ ನಂತರ ಕಾಯಂ ನೋಂದಣಿ ಮಾಡಿಸದೆ ಇರುವ ವಾಹನಗಳ ಮಾಲೀಕರು ಹಾಗೂ ವಿತರಕರು 31-03-2020 ರ ಒಳಗಾಗಿ ಭಾರತ್ ಸ್ಟೇಜ-4 ವಾಹನಗಳ ನೋಂದಣಿ ಮಾಡಿಕೊಳ್ಳಬೇಕು. ಹಾಗೂ 01-04-2020 ರಿಂದ ಭಾರತ್ ಸ್ಟೇಜ್-6 ವಾಹನಗಳನ್ನು ಮಾತ್ರ ನೋಂದಣಿಗಳನ್ನು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ನಿಗದಿಪಡಿಸಿದ ದಿನಾಂಕದೊಳಗೆ ನೋಂದಣಿ ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!