ಎ.ಎಸ್.ಪಾಟೀಲ್ ನಡಹಳ್ಳಿ ಸೀಸನ್ ವೈಜ್ ರಾಜಕಾರಣಿ

BI NEWS, ಬಿಜಾಪುರ : ತಮಗೆ ಹಾಗೂ ತಮ್ಮ ಧರ್ಮಪತ್ನಿಗೆ ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಕ್ಷೇತ್ರಗಳಲ್ಲಿ ಒಂದೇ ಮನೆಯಲ್ಲಿ ಎರಡು ಎಂ.ಎಲ್.ಎ ಟಿಕೆಟ್ ಕೇಳಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಆ ಟಿಕೆಟ್ ಸಿಗದೇ ಹೋದಾಗ ಅನಿವಾರ್ಯವಾಗಿ ಬಿಜೆಪಿಗೆ ಬಂದಿರುವ ಇವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿರುವದು ಹಾಸ್ಯಾಸ್ಪದ ಎಂದು ಜಿಲ್ಲಾ ಕಾಂಗ್ರೆಸ್ಸ್ ಸೇವಾದಳ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಟೀಕಿಸಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್‍ರು ಮಾಡಿರುವ ಕಾರ್ಯಸಾಧನೆಯನ್ನು ನನಗೆ ತೋರಿಸಿ, ಚರ್ಚೆಗೆ ಬನ್ನಿ ಎಂದು ನಡಹಳ್ಳಿ ಹೇಳಿದ್ದಾರೆ. ನೀರಾವರಿ ಕ್ಷೇತ್ರದಲ್ಲಿ ಅವರು ಮಾಡಿರುವ ಕಾರ್ಯವನ್ನು ತೋರಿಸುವ ಅಗತ್ಯವಿಲ್ಲ. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಪ್ರಚಾರಕ್ಕೆ ಎ.ಎಸ್.ಪಾಟೀಲ್‍ರು ಹೇಗಿದ್ದರೂ ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತಾರೆ. ಆಗ ಪ್ರತಿ ರಸ್ತೆಯಲ್ಲಿಯೂ ಎಂ.ಬಿ.ಪಾಟೀಲ್‍ರು ಮಾಡಿರುವ ಕೆಲಸಗಳು ಸಿಗುತ್ತವೆ. ಸಾಧ್ಯವಿದ್ದರೆ ಅಲ್ಲಿಯೇ ಹೋಲದಲ್ಲಿ ಕೆಲಸ ಮಾಡುವ ಸಾಮಾನ್ಯ ರೈತರನ್ನು ಮಾತನಾಡಿಸಿದರೂ ಅವರು ಎಂ.ಬಿ.ಪಾಟೀಲ್‍ರ ಹೆಸರು ಹೇಳುತ್ತಾರೆ. ನಡಹಳ್ಳಿಯವರ ಹಾಗೆ ಎಂ.ಬಿ.ಪಾಟೀಲ್‍ರು ಸ್ವಯಂ ಘೋಷಿತ ಹೋರಾಟಗಾರರು ಅಲ್ಲ. ಅವರ ಕಾರ್ಯಸಾಧನೆಗೆ ಮೆಚ್ಚಿ ನಡಹಳ್ಳಿಯವರ ಸದ್ಯದ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ ಅಧ್ಯಕ್ಷತೆಯ ಶ್ರೀ ಸಿದ್ಧೇಶ್ವರ ಸಂಸ್ಥೆಯವರೇ ಲಕ್ಷಾಂತರ ಜನರ ಮುಂದೆ ವಿಜಯಪುರದ ಕ್ರೀಡಾಂಗಣದಲ್ಲಿ ಆಧುನಿಕ ಭಗೀರಥ ಪ್ರಶಸ್ತಿ ಗೌರವಿಸಿದ್ದಾರೆ ಎಂಬುದನ್ನು ನೆನಪಿಸುತ್ತೇನೆ.

ಎ.ಎಸ್.ಪಾಟೀಲ್ ನಡಹಳ್ಳಿ ಸೀಸನ್ ವೈಜ್ ರಾಜಕಾರಣಿ, ಕಾಲ-ಕಾಲಕ್ಕೆ ಕ್ಷೇತ್ರಗಳನ್ನು, ಪಕ್ಷಗಳನ್ನು ಬದಲಾವಣೆ ಮಾಡುತ್ತಾ ಸಂದರ್ಭಾನುಸಾರ ಕೆಲವರನ್ನು ಹೊಗಳುತ್ತಾ, ಕೆಲವರನ್ನು ತೆಗಳುವ ಇವರು ಪ್ರತಿ ಚುನಾವಣೆಯಲ್ಲಿ ಒಂದೊಂದು ಗಿಮಿಕ್ ಮಾಡುತ್ತಾರೆ ಎಂದು ಡಾ.ಗಂಗಾಧರ ಸಂಬಣ್ಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!