ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವತೀರ್ಥ ಮಹಾಸ್ವಾಮೀಜಿಯ ನಿಧನಕ್ಕೆ ಅನೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ

ವಿಜಯಪುರ : ಈ ಶತಮಾನ ಕಂಡ ಲೋಕಮಾನ್ಯ ಸಂತರಾಗಿದ್ದ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವತೀರ್ಥ ಮಹಾಸ್ವಾಮೀಜಿಗಳು ಬೃಂದಾವನವಾಸಿಯಾಗಿದ್ದು, ದೇಶಕ್ಕೆ ಹಾಗೂ ನಾಡಿಗೆ ಹಾಗೂ ಅಪಾರ ಭಕ್ತ ವೃಂದಕ್ಕೆ ತುಂಬಲಾರದ ನಷ್ಟವಾಗಿದೆ. ದೀನ,ದಲಿತ, ದುರ್ಬಲರ ಆಶಾಕಿರಣವಾಗಿದ್ದ, ಶ್ರೀಗಳ ಅಗಲಿಕೆಯಿಂದ ಈ ನಾಡು ಒಬ್ಬ ಮಹಾನ್ ಸಂತರನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಂಸದರಾದ ರಮೇಶ ಜಿಗಜಿಣಗಿ ಕಂಬನಿ ಮಿಡಿದರು.

ಶ್ರೀಗಳು ತಮ್ಮ ಜೀವಿತ ಅವಧಿಯಲ್ಲಿ ದೇಶದ ಮತ್ತು ನಾಡಿನ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮೆಲ್ಲರ ಎದುರಿಗಿದೆ. ಪೂಜ್ಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕವಟಗಿ ಸಂತಾಪ ಸೂಚಿಸಿದರು.

ಭಾರತ ದೇಶದಲ್ಲಿ ಸನಾತನ ಧರ್ಮ ಪರಂಪರೆ ಉಳಿಯಬೇಕಾದರೆ, ಧರ್ಮದಲ್ಲಿವುಂಟಾಗಿರುವ ಅಸಮಾನತೆ ಮತ್ತು ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಗಳನ್ನು ಬೇರು ಸಮೆತೆ ಕಿತ್ತೆಸೆಯಬೇಕೆಂಬುದು ಶ್ರೀಗಳ ಜೀವ ಮಾನದ ಆಶಯವಾಗಿತ್ತು. ಅದರಂತೆ ಶ್ರೀಗಳು ಸಮಾಜದಲ್ಲಿ ಸಮಾನತೆ ಮೂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಇಂತಹ ಪರಮಪೂಜ್ಯರನ್ನು ನಾವಿಂದು ಕಳೆದುಕೊಂಡಿರುವುದು ದುಃಖದ ಸಂಗತಿ ಎಂದು ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿದರು.

ಶ್ರೀಗಳ ಅಗಲಿಕೆಯಿಂದ ಇಡೀ ಮನುಕುಲಕ್ಕೆ ತುಂಬಲಾರದ ನಷ್ಟವಾಗಿದೆ. ಇಡೀ ಸಂಘ ಪರಿವಾರದ ವಿಚಾರಕ್ಕೆ ಚೈತನ್ಯ ಮೂರ್ತಿಗಳಲ್ಲೊಬ್ಬರಾಗಿದ್ದರು. ಸನಾತನ ಸಂಸ್ಕೃತಿ ಆತ್ಮಶಕ್ತಿ ಸ್ವರೂಪಿ ಯತಿ-ಶ್ರೇಷ್ಠಾತಿಶ್ರೇಷ್ಠ ಇಂದು ಭೌತಿಕವಾಗಿ ಕೃಷ್ಣ ಲೀನವಾದ ಸುದ್ದಿ ಅತೀವ ದುಃಖ ತರಿಸಿದೆ ಎಂದು ಅರುಣ ಶಹಾಪೂರ ಹೇಳಿದರು.

ಭರತ ಖಂಡವು ಪುರಾತನ ಕಾಲದಿಂದಲೂ ವಿಶ್ವಕ್ಕೆ ಜಗದ್ಗುರುವಾಗಿದೆ. ಆ ಗುರುವಿನ ಪರಂಪರೆಯನ್ನು ಮುನ್ನೆಡೆಸಲು ಈ ದೇಶದಲ್ಲಿ ಹಾಗೂ ಈ ನಾಡಿನಲ್ಲಿ ಹಲವು ಸಂತ ಮಹಾಂತರು ಉದಯಿಸಿ ಪರಂಪರೆಯನ್ನು ಉಳಿಸಲು ಶ್ರಮಿಸಿದ್ದಾರೆ. ಅಂತವರಲ್ಲಿ ಅಗ್ರಘನ್ಯ ಸಾಲಿನಲ್ಲಿ ನಿಲ್ಲುವರೆಂದರೆ ಉಡುಪಿಯ ಬೃಂದಾವನವಾಸಿ ಪೇಜಾವರ ವಿಶ್ವೇಶ್ವರ ತೀರ್ಥ ಮಹಾಸ್ವಾಮಿಗಳು ಶ್ರೀಗಳ ಅಗಲಿಕೆಯಿಂದ ಇಡೀ ಹಿಂದು ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಕಾಂತ ಬಗಲಿ,ಆರ್. ಎಸ್. ಪಾಟೀಲ ಕುಚಬಾಳ, ಸಂಗರಾಜ ದೇಸಾಯಿ ವಿವೇಕಾನಂದ ಡಬ್ಬಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿಂದು ಸಮಾಜದ ಏಳ್ಗೆಗಾಗಿ ಮಡಿವಂತಿಕೆ ಬೇಲಿಯನ್ನು ಮೀರಿ ಬೆಳೆದ ಕ್ರಾಂತಿಕಾರಿ ಯತಿವರ್ಯ, ಸಂಪ್ರದಾಯವಾದಿಗಳ ಪಾಲಿಗೆ ಕ್ರಾಂತಿಕಾರಿಯಾದ ಪೇಜಾವರ ಶ್ರೀ ವಿಶ್ವೇಶತೀರ್ಥರ ಸ್ವಾಮೀಜಿಯವರದ್ದು ವಾಮನಮೂರ್ತಿಯ ಇಂದು ನಮ್ಮನಗಲಿದ್ದು ಈ ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಶಿವರುದ್ರ ಬಾಗಲಕೋಟ ಹಾಗೂ ಮಳುಗೌಡ ಪಾಟೀಲ ತಿಳಿಸಿದ್ದಾರೆ.

ಶ್ರೀಗಳು ಆಧ್ಯಾತ್ಮ ಭಕ್ತಿ ಸಮಾಜಿಕ ಜೋಡನೆ ನಮ್ಮ ದೇಶವನ್ನು ಸಂರಕ್ಷಣೆ ಮಾಡಿದಲ್ಲದೆ ಹಿಂದುತ್ವವನ್ನು ಅರ್ತಫೂರ್ಣವಾಗಿ ಬಲಿಷ್ಠಗೊಳಿಸಿ, ಸಾಮಾಜಿಕ ಸಾಮರಸ್ಯ ಸಾರಿದ ಮಹಾನ್ ಸಂತರಾದ ಶ್ರೀಗಳ ಅಗಲಿಕೆಗೆ ಅತೀವ ದುಖವುಂಟಾಗಿದೆ ಎಂದು ಭೀಮಾಶಂಕರ ಹದನೂರ, ಸಿದ್ದು ಮಲಿಕಾರ್ಜುನ ಮಠ ತಿಳಿಸಿದ್ದಾರೆ.

ಹಿಂದು ಸಮಾಜದ ದೀಪ, ಸನಾತನ ಧರ್ಮದ ಬೆಳಕಾಗಿದ್ದ ಹಾಗೂ ಶ್ರಮವನ್ನು ಅಳವಡಿಸಿಕೊಂಡಿರುವ ಮಹಾನ್ ಚೇತನರಾದ ಶ್ರೀಗಳ ಅಗಲಿಕೆ ಹಿಂದು ಧರ್ಮ ತನ್ನ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡAತಾಗಿದೆ ಎಂದು ಗೌಳಿ ಸಮಾಜದ ಮುಖಂಡರಾದ ವಿನಾಯಕ ದಹಿಂಡೆ (ಗೌಳಿ) ದುಃಖವ್ಯಕ್ತಪಡಿಸಿದರು.

error: Content is protected !!