ಇಡೀ ಕ್ಷೇತ್ರ ನೀರಾವರಿ ಮಾಡುವವರೆಗೂ ವಿರಮಿಸುವುದಿಲ್ಲ : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI : ಇಡೀ ಕ್ಷೇತ್ರದಲ್ಲಿ ನೀರಾವರಿ ಮಾಡುವವರೆಗೂ ವಿರಮಿಸುವುದಿಲ್ಲ, ಪ್ರತಿಯೊಂದು ಗ್ರಾಮಗಳು ಕುಡಿಯುವ ನೀರಿನ ಬವಣೆ ಮುಕ್ತವಾಗಬೇಕು ಈ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಂದು ಕೆರೆಗಳನ್ನು ತುಂಬಿಸಲಾಗಿದೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.

ಮಂಗಳವಾರ ಪಟ್ಟಣದ ಹೊರವಲಯದಲ್ಲಿ ತುಂಬಿ ನಿಂತಿರುವ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಮತಕ್ಷೇತ್ರ ಬಹುದಿನಗಳಿಂದ ಕುಡಿಯುವ ನೀರಿನ ಬವಣೆ ಅನುಭವಿಸುತ್ತಿತ್ತು. ಈಗ ಕಾಲುವೆಗಳ ಮೂಲಕ ಬಹುತೇಕ ಕೆರೆಗಳನ್ನು ತುಂಬಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಕಾಲುವೆಗಳ ಮೂಲಕ ಕೆರೆ ತುಂಬಿಸಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದ್ದು, ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ. ಕೆರೆ ತುಂಬುವುದರಿಂದ ಪಟ್ಟಣದಲ್ಲಿನ ಕೊಳಬಾವಿಗಳ ಅಂತರ್ಜಲಮಟ್ಟ ಹೆಚ್ಚಾಗುತ್ತಿದ್ದು ನೀರಿನ ತಾಪತ್ರಯ ತಪ್ಪಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ರೈತರ ಪರವಾಗಿ ಮಾತನಾಡಿದ ರೈತಮುಖಂಡ ಅಜೀಜ ಯಲಗಾರ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಾಗಿನಿಂದ ನಮ್ಮ ಮತಕ್ಷೇತ್ರ ನೀರಿಗಾಗಿ ತೊಂದರೆ ಅನುಭವಿಸುತ್ತಿತ್ತು. ಸೋಮನಗೌಡರು ಶಾಸಕರಾದ ಬಳಿಕ ಕ್ಷೇತ್ರದ ಕೆರೆ ತುಂಬಿಸಿ ರೈತರ ಬಾಳು ಹಸನಾಗಿಸಿದ್ದಾರೆ. ಅವರಿಗೆ ಇಡೀ ಕ್ಷೇತ್ರದ ರೈತರ ಪರವಾಗಿ ಅಭಿನಂದನೆಗಳು ಎಂದರು.

ಇದೇ ಸಂದರ್ಭದಲ್ಲಿ ಕೆರೆ ತುಂಬಿಸುವ ಕಾರ್ಯ ಮಾಡಿದ ಶಾಸಕರಿಗೆ ರೈತರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್ ಎಸ್ ಪಾಟೀಲ ಕುಚಬಾಳ, ಸಾಹೇಬಗೌಡ ಪಾಟೀಲ ಸಾಸನೂರ, ಸುರೇಶಗೌಡ ಪಾಟೀಲ ಸಾಸನೂರ, ತಹಸೀಲ್ದಾರ ವೈ ಬಿ ನಾಗಠಾಣ, ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ, ತಾಪಂ ಇಓ ಸುನೀಲ ಮದ್ದಿನ,ಪಪಂ ಸದಸ್ಯ ರಿಯಾಜ ಯಲಗಾರ, ಮೋಹನಗೌಡ ಹಿರೇಗೌಡರ,ಭೀಮನಗೌಡ ಸಿದರೆಡ್ಡಿ, ಶ್ರೀಶೈಲ ಕಬ್ಬಿನ ರಮೇಶ ಮಸಬಿನಾಳ, ರಾಜು ಮೆಟಗಾರ, ಮಹಾಂತೇಶ ವಂದಾಲ, ಬಸವರಾಜ ಹಳಿಮನಿ, ಸಿದ್ದು ಮಸಬಿನಾಳ, ಬಸವರಾಜ ತಳವಾರ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ರೈತರು, ಹಿತೈಸಿಗಳು ಅಭಿಮಾನಿಗಳು ಪಾಲ್ಗೊಂಡಿದ್ದರು.

error: Content is protected !!