ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

BI NEWS, ಬಿಜಾಪುರ : ಆಯ್.ಪಿ.ಡಿ.ಎಸ್. ಯೋಜನೆಯಡಿಲ್ಲಿ ವಿಜಯಪುರ ನಗರ ಫೀಡರ್‍ನ ಮಾರ್ಗದ ಮೇಲೆ ಹಳೆಯ ವಾಹಕವನ್ನು ತೆಗೆದು ಹೊಸ ವಾಹಕಗಳ ಜೋಡುವ ಕಾಮಗಾರಿ ಕೈಗೊಳ್ಳುವ ನಿಮಿತ್ಯ ಸದರಿ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುವ ನಗರದ ವಿವಿಧ ಬಡಾವಣೆಗಳಿಗೆ ಮಾ.17 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಗಣೇಶ ನಗರ ಫೀಡರ್‍ದಿಂದ ಸರಬರಾಜಾಗುವ ಲಕ್ಷ್ಮಿನಗರ, ಇಬ್ರಾಹಿಂಪುರ, ತ್ರಿಮೂರ್ತಿ ನಗರ, ಮಲ್ಲಿಕಾರ್ಜುನ ನಗರ, ಚಿದಂಬರ ನಗರ, ಆನಂದ ನಗರ, ಗುರುಪಾದೇಶ್ವರ ನಗರ, ಶಾಂತವೀರ ನಗರ, ಗಡಗಿ ಬಡಾವಣೆ, ವಜ್ರ ಹನುಮಾನ ನಗರ, ವೆಂಕಟೇಶ ನಗರ, ಹಿಟ್ಟಿನಹಳ್ಳಿ ಫಾರ್ಮ, ಭಾಗ್ಯವಂತಿ ಹಾಸ್ಪಿಟಲ್ ಸುತ್ತಮುತ್ತ, ಸದಾಶಿವ ನಗರ, ಸಾಯಿ ಪಾರ್ಕ್, ಸಾಯಿ ರೆಸಿಡೆನ್ಸಿ, ಕೆ.ಎಚ್.ಬಿ. ಕಾಲನಿ, ನಂದಿನಿ ಬಡಾವಣೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹೆಸ್ಕಾಂದೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

error: Content is protected !!