ಆಹಾರಾ ಧಾನ್ಯ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ: ಡಿಸಿ ಪಾಟೀಲ

BI ಬಿಜಾಪುರ : ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತೆ ವಹಿಸಲು ಪ್ರಯಾಣಿಕರನ್ನು ಹೊತ್ತೊಯ್ಯುವ ಅಂತರ್‌ರಾಜ್ಯ, ಅಂತರ್‌ಜಿಲ್ಲಾ ಮತ್ತು ಜಿಲ್ಲೆಯ ಒಳಗೆ ರಸ್ತೆ ಸಾರಿಗೆ ನಿಗಮದ ಮತ್ತು ಖಾಸಗಿ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಜಿಲ್ಲಾಧಿಕಾರಿ ವೈ,ಎಸ್ ಪಾಟೀಲ್ ಅವರು ಆದೇಶ ನೀಡಿದ್ದಾರೆ.

ದಿನಾಂಕ 24-03-2020 ಬೆಳಿಗ್ಗೆ 6 ಗಂಟೆಯಿಂದ 31-03-2020 ರ ಮಧ್ಯರಾತ್ರಿವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ಅತ್ಯವಶ್ಯಕ ವಸ್ತುಗಳನ್ನು ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆದಿರುವ ಖಾಸಗಿ ವಾಹನಗಳಿಗೆ ಮಾತ್ರ ನಿರ್ಭಂಧ ಇರುವುದಿಲ್ಲ. ಅದರಂತೆ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ಬಾಡಿಗೆ ಸೇವೆಗೆ ಪಡೆಯುವ ವಾಹನಗಳಿಗೂ ನಿರ್ಭಂಧಿಸಲಾಗಿದ್ದು, ಅತ್ಯಾವಶ್ಯಕ ವಸ್ತುಗಳು ಮತ್ತು ವೈದ್ಯಕೀಯ ತುರ್ತುಸೇವೆಗೆ ಬಳಸುವ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಹಾರ, ಪಡಿತರ ನ್ಯಾಯಬೆಲೆ ಅಂಗಡಿ, ಹಾಲು, ತರಕಾರಿಗಳು, ಹಣ್ಣು-ಹಂಪಲ, ಮಾಂಸ, ಮೀನು, ದಿನಸಿ ವಸ್ತುಗಳಿಗೆ ಮಾತ್ರ ನಿರ್ಭಂಧ ಇರುವದಿಲ್ಲ ಎಂದಿರುವ ಅವರು ಕೊರೋನಾ ಪರಸ್ಥಿತಿಯನ್ನು ಬಳಸಿ ವ್ಯಾಪಾರಸ್ತರು, ವರ್ತಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಆಹಾರ ಧಾನ್ಯಗಳ ಮಾರಾಟದಲ್ಲಿ ತೊಡಗಿದಲ್ಲಿ ಅಂತವರ ವಿರುದ್ದವು ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಾಗುವುದು. ಆಹಾರ ನಿರಿಕ್ಷಕರು ಈ ಕುರಿತು ನಿರಂತರ ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಸೂಚನೆ ನೀಡಿದ್ದಾರೆ.

error: Content is protected !!