ಆರ್ಥಿಕ ಸಬಲತೆಗಾಗಿ ಕೃಷಿ ಜೊತೆಗೆ ಮೀನು ಕೃಷಿ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚನೆ

BI ಬಿಜಾಪುರ : ಜಿಲ್ಲೆಯಲ್ಲಿ ಮೀನು ಕೃಷಿ ಕೈಗೊಳ್ಳಲು ವಿಪುಲ ಅವಕಾಶಗಳಿದ್ದು, ತಮ್ಮ ಆರ್ಥಿಕ ಸಬಲತೆಗಾಗಿ ಕೃಷಿ ಜೊತೆಗೆ ಮೀನು ಕೃಷಿ ಕೈಗೊಳ್ಳಲು ಮುಂದಾಗುವಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರು, ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರು ರೈತರಿಗೆ ಕರೆ ನೀಡಿದರು.
ಜಿಲ್ಲಾ ಪಮಚಾಯತಿ, ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಹತ್ತಿರ ಇರುವ ಆನ್‌ಲೈನ್ ಟ್ರೇಡಿಂಗ್ ವಾಣಿಜ್ಯ ಸಂಕೀರ್ಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಮತ್ಸö್ಯಮೇಳ-2020 ಏರ್ಪಡಿಸಲಾಗಿದ್ದ ಮತ್ಸö್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಮೀನು ಕೃಷಿ ಕೈಗೊಳ್ಳಲು ಹಲವು ಅವಕಾಶಗಳಿವೆ.ಕೃಷ್ಣ,ಭೀಮಾ ನದಿಗಳು ಸೇರಿದಂತೆ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯ ಹಾಗೂ ಅನೇಕ ಕೆರೆಗಳು ಮೀನು ಕೃಷಿಗೆ ಮತ್ತು ಮೀನು ಉತ್ಪಾದ ಉತ್ಪಾದನೆಗೆ ನೆರವಗಿದ್ದು ಇದರ ಜೊತೆಗೆ ತಮ್ಮ ಕೃಷಿ ಹೊಂಡಗಳಲ್ಲಿಯೂ ಮೀನುಗಾರಿಕೆ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಸಾಮೂಹಿಕ ಕೃಷಿಹೊಂಡಗಳಲ್ಲಿ ಮೀನು ಕೃಷಿಯಿಂದ ವಾರ್ಷಿಕವಾಗಿ 7 ಲಕ್ಷ ರೂ ಗಳ ವರಗೆ ಆದಾಯ ಪಡೆಯಬಹುದಾಗಿದೆ. ಸರ್ಕಾರದ ವತಿಯಿಂದ ವಿಶೇಷವಾಗಿ ಮೀನುಗಾರಿಕೆ ಇಲಾಖೆಯಿಂದ ಅನೇಕ ಪ್ರೋತ್ಸಾಹ ಧನ- ಸಹಾಯಧನ ಸೌಲಭ್ಯ ಲಭ್ಯವಿದೆ. ಆಹಾರ ಪೌಷ್ಠಿಕಾಂಶವುಳ್ಳ ಮೀನು ಸಾಕಾಣಿಕೆಗೆ ಇರುವಂತಹ ಸಹಾಯ ಸೌಲಭ್ಯಗಳನ್ನು ಅಧಿಕಾರಿಗಳು ಸಕಾಲಕ್ಕೆ ರೈತರಿಗೆ ದೊರಕಿಸಬೇಕು. ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ವ್ಯವಸ್ಥೆ ಮತ್ತು ಸೌಲತ್ತುಗಳ ಬಗ್ಗೆ ರೈತರಿಗೆ ತಿಳಿ ಹೇಳುವಂತಾ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 500 ಕೃಷಿ ಹೊಂಡಗಳನ್ನು ನಿರ್ಮಿಸಿ ಮೀನು ಕೃಷಿಕರಿಗೆ ಸಲಹೆ ಮತ್ತು ಸಲಕರಣೆ ನೀಡಲಾಗಿದೆ. ಭಾವಿ ಮತ್ತು ಹೊಂಡಗಳನ್ನು ಹೊಂದಿರುವ ರೈತರಿಗೆ ಹೊರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲು ಉತ್ತೇಜನ ನೀಡಲಾಗಿತ್ತಿದೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೌಗು ಹಾಗೂ ಚೌಳು ಪ್ರದೇಶಗಳನ್ನು ಹೊಂದಿದ್ದು ಜಿಲ್ಲೆಯಲ್ಲಿ 2000 ಜನ ಮೀನುಗಾರಿಕೆಯಲ್ಲಿ ತೊಡಗಿಗೊಂಡಿದ್ದಾರೆ. ಅವರ ಉನ್ನತಿಗಾಗಿ ಹಾಗೂ ಮೀನುಗಾರಿಕೆ ಸಹಕಾರಿ ಸಂಘ ಅಥವಾ ವಯಕ್ತಿಕ ಮೀನು ಮಾರಾಟಗಾರರಿಗೆ ದ್ವಿಚಕ್ರ ವಾಹನ ಮತ್ತು ಶಾಕ್ ನಿರೋಧಕ ಪಟ್ಟಿಗೆ (ಐಸ್‌ಬಾಕ್ಸ್) ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಪ್ರತಿ ಫಲಾನುಭವಿಗಳಿಗೆ 20.000 ರೂ ಸಹಾಯಧನ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಮುದ್ದೇಬಿಹಾಳ ಹಾಗೂ ಹಾಗೂ ಭೂತನಾಳದಲ್ಲಿ ಮೀನುಗಾರಿಕೆಗೆ ಮೀನುಎಕರೆಗೆ 1.40.000 ರೂ ಸಹಾಯಧನ ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೋಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಮತ್ಸö್ಯ ಆಶ್ರಯ ಯೋಜನೆಯಡಿಯಲ್ಲಿ. ಮೀನುಗಾರಿಕೆ ವಸತಿ ಸೌಕರ್ಯ ಕಲ್ಪಿಸಿಕೊಳ್ಳಲು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಫಲಾನುಭವಿಗಳಿಗೆ 1.50 ಲಕ್ಷ ರೂ ಹಾಗೂ ಸಾಮಾನ್ಯ ಫಲಾನುಭವಿಗಳಿಗೆ 1.20 ಲಕ್ಷ ರೂಗಳ ವರಗೆ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಮಾತನಾಡಿ ಜಿಲ್ಲೆಯ ಕೃಷಿಕರು ಕೃಷಿಹೊಂಡ ಗಳನ್ನು ಕೇವಲ ಕೃಷಿಗಳಿಗೆ ಮಾತ್ರ ಉಪಯೋಗಿಸದೆ ಅದನ್ನು ಉಪ ಕಸಬಾಗಿ ಮೀನುಗಾರಿಕೆಗೂ ಬಳಸಿಕೊಳ್ಳಬೇಕು ಇದರಿಂದ ರೈತರ ಆದಾಯದಲ್ಲಿ ಹೆಚ್ಚಳ ವಾಗಲಿದೆ. ಕೃಷಿಯ ಜತೆಗೆ ಮೀನುಗಾರಿಗೆ ಆಧ್ಯತೆ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಹರ್ಷಾ ಶಟ್ಟಿ, ವಿಜಯಪುರ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಶೈಲ ಗಂಗನಳ್ಳಿ, ಮುದ್ದೇಬಿಹಾಳ ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ.ಎಸ್ ಲಮಾಣಿ, ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಎಸ್. ವಿಜಯಕುಮಾರ, ಸಹಾಯಕ ಪ್ರಾಧ್ಯಾಪಕ ಅತನೂರ ಸೇರಿದಂತೆ ಇತರರಿದ್ದರು.

error: Content is protected !!