ಆನಂದ ಮಹಲನಲ್ಲಿ ಮನಸೂರೆಗೊಳಿಸಿದ ಸಂಗೀತ ಸಂಜೆ ಕಾರ್ಯಕ್ರಮ

BI ಬಿಜಾಪುರ : ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಯ ಹಿತದೃಷ್ಠಿಯಿಂದ ಏರ್ಪಡಿಸಲಾಗಿದ್ದ ನಗರದ ಐತಿಹಾಸಿಕ ಆನಂದ ಮಹಲನಲ್ಲಿ ಎರಡು ದಿನಗಳ ಸಂಗೀತ ಸಂಜೆ ಕಾರ್ಯಕ್ರಮದ ಮೋದಲದಿನ ಯಶಸ್ವಿಯಾಗಿ ಪ್ರೇಕ್ಷಕರ ಗಮನ ಸೆಳೆಯಿತು.
ಜಿಲ್ಲಾಡಳಿತ,ಅಬಕಾರಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋಧ್ಯಮ ಇಲಾಖೆ ಸಹಯೋಗದಲ್ಲಿ ನಗರದ ಆನಂದ ಮಹಲನಲ್ಲಿ 2 ದಿನಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಅದರ ಅಂಗವಾಗಿ ಜಿಲ್ಲೆಯ ಪ್ರತಿಭೆ ಶ್ರೇಯಾ ಪಾಟೀಲ ಅವರು ಶಿವಸ್ತುತಿ ಹಾಗೂ ಬೆಣ್ಣೆ ಕದ್ದಿಲ್ಲಮ್ಮ ಎಂಬ ಸಂಗೀತಕ್ಕೆ ಭರತನಾಟ್ಯದ ಮೂಲಕ ಮನರಂಜಿಸಿದರು.
ಸೋಲಾಪೂರದ ಖ್ಯಾತ ಸುಂದ್ರಿ ವಾದಕರಾದ ಭೀಮಣ್ಣ ಜಾಧವ ಅವರು ಸಂಗೀತ ಲೋಕದ ವಿಶೇಷ ವಾದ್ಯ ಎಂದು ಕರೆಯಿಸಿಕೊಳ್ಳುವ ಸುಂದ್ರಿ ವಾದನದ ಮೂಲಕ ಸುಮಾರು ಇಪ್ಪತ್ತು ನಿಮೀಷಗಳ ಕಾಲ ಕಾರ್ಯಕ್ರಮದಲ್ಲಿ ನೆರೆದವರನ್ನು ಮಂತ್ರ ಮುಗ್ದರನ್ನಾಗಿಸಿದರು. ಅವರಿಗೆ ಖ್ಯಾತ ತಬಲಾವಾದಕ ಪಂ. ಶಾಂತಲಿಂಗ ದೇಸಾಯಿ ಸಾಥ್ ನೀಡಿದರು. ನಂತರ ಧಾರವಾಡದ ಐಶ್ವರ್ಯ ದೇಸಾಯಿ ಅವರು ಸುಗಮ ಸಂಗೀತ ಹಾಡಿದರು.
ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರೇಕ್ಷಕರಿಗೆ ರಂಜಿಸಿದ ಎಲ್ಲ ಸಂಗೀತ ಕಲಾವಿದರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಆಯುಕ್ತ ರಮೇಶ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಇತರು ಇದ್ದರು.
ಎರಡು ದಿನಗಳ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಫೆ.2 ರಂದು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ, ಪದ್ಮಶ್ರೀ ಪುರಸ್ಕೃತರಾದ ಪಂಡಿತ ಎಂ.ವೆಂಕಟೇಶಕುಮಾರ ಇವರಿಂದ ವಚನಗಳು, ದಾಸರ ಪದಗಳು ಮತ್ತು ಹಿಂದುಸ್ಥಾನಿ ಸಂಗೀತ ಗಾಯನ ನಡೆಯಲಿದ್ದು, ಅವರಿಗೆ ಹಾರ್ಮೋನಿಯಂ ವಾದಕ ಸುಧಾಂಶು ಕುಲಕರ್ಣಿ ಸಾಥ ನೀಡಲಿದ್ದಾರೆ. ಸಂಗೀತ ಸಂಜೆ ಕಾರ್ಯಕ್ರಮವು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

error: Content is protected !!