ಆಕಸ್ಮಿಕ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಶಾಸಕ ಸಾಸನೂರ

ದೇವರಹಿಪ್ಪರಗಿ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಬಿಬಿಇಂಗಳಗಿ ದೇವರಹಿಪ್ಪರಗಿ ರಸ್ತೆ ಸುಧಾರಣಾ ಕಾಮಗಾರಿಯನ್ನು ಶಾಸಕ ಸೋಮನಗೌಡ ಪಾಟೀಲ ಸಾಸನೂರ ವೀಕ್ಷಿಸಿದರು,
ಬುಧವಾರ ಕಾಮಗಾರಿ ನಡೆದ ಸ್ಥಳಕ್ಕೆ ಆಕಸ್ಮಿಕ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಹಾಗೂ ಕಾಮಗಾರಿ ಪ್ರಗತಿ
ಕುರಿತು ಪರಿಶೀಲನೆ ನಡೆಸಿದರು. ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು, ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಈ ರಸ್ತೆ ಸುಧಾರಣೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಕಳಪೆ ಕಾಮಗಾರಿ ಮಾಡಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಈಗಾಗಲೇ ಬಿಬಿಇಂಗಳಗಿ-ದೇವರಹಿಪ್ಪರಗಿ ರಸ್ತೆ ಸುಧಾರಣೆಗೆ 10 ಕೋಟಿ ರೂ. ಕಾಮಗಾರಿ ನಡೆದಿದ್ದು, ಇದಕ್ಕೆ ಮುಂದುವರೆದ ಬಾಗವಾಗಿ ಮತ್ತೇ 10 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ದೇವರಹಿಪ್ಪರಗಿಯಿಂದ ಈ ಕಡೆಗೆ ರಸ್ತೆ ಕಾಮಗಾರಿ ಪ್ರಾರಮಭಿಸಲಾಗುವುದು.
ಹಂತ ಹಂತವಾಗಿ ಕ್ಷೇತ್ರದ ಎಲ್ಲ ರಸ್ತೆಗಳನ್ನು
ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೆ ಸರ್ಕಾರವಿದ್ದು ಹೆಚಚಿನ ಅನುದಾನ ತರಲು ಅನುಕೂಲವಾಗಲಿದೆ. ಮಾನ್ಯ ಮೂಖ್ಯಮಂತ್ರಿಗಳು ಉತ್ತರಕರ್ನಾಟಕ ಅದರಲ್ಲಿ ವಿಜಯಪುರ ಜಿಲ್ಲೆಯ ಅಬಿವೃದ್ಧಿಗಾಗಿ ವಿಶೇಷ ಕಾಳಜಿ ವ್ಯಕ್ತ ಪಡಿಸಿದ್ದು, ಚುನಾವಣೆ ಮುಗಿದ ನಂತರ ಇನ್ನೂ ಹೆಚ್ಚಿನ ಅನುದಾನ ನೀಡಲಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಮೂಲಕ ಅನುದಾನ ಮಂಜೂರು ಮಾಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶೇಖರಗೌಡ ಪಡೇಕನೂರ, ರಮೇಶ ಮಸಬಿನಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!