ಅಸುರಕ್ಷಿತ ವಿದ್ಯುತ್ ಕಂಬಗಳ ಮಾಹಿತಿ ನೀಡಲು ಸೂಚನೆ

BI NEWS, ಬಿಜಾಪುರ : ಅಸುರಕ್ಷಿತ ವಿದ್ಯುತ್ ಮಾರ್ಗ, ಸ್ಥಾವರ, ಪರಿವರ್ತಕರ ಕೇಂದ್ರಗಳು ಉದಾಹರಣೆಗೆ ಬಾಗಿರುವ ಕಂಬಗಳ, ಜೋತುಬಿದ್ದಿರುವ ವಾಹಕಗಳ ಮತ್ತು ಬೇಲಿ ಇರದ ಅಸುರಕ್ಷಿತ ಪರಿವರ್ತಕ ಕೇಂದ್ರಗಳು ಕಂಡು ಬಂದಲ್ಲಿ ತಮ್ಮ ವ್ಯಾಪ್ತಿಯ ಹೆಸ್ಕಾಂ ಶಾಖಾಧಿಕಾರಿಗಳಿಗೆ ತಿಳಿಸಿದ್ದಲ್ಲಿ ತಕ್ಷಣ ಸರಿಪಡಿಸಲಾಗುವುದು ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಇಂತಹ ಕಂಬಗಳು, ಪರಿವರ್ತಕಗಳು ಕಂಡುಬಂದಲ್ಲಿ ತಮ್ಮ ವ್ಯಾಪ್ತಿಯ ಹೆಸ್ಕಾಂ ಶಾಖಾಧಿಕಾರಿಗಳ ಉಪವಿಭಾಗ-ವೃತ್ತ ಕಚೇರಿಗಳಿಗೆ ಮಾಹಿತಿ ನೀಡಬೇಕು. ಹಾಗೂ ಪ್ರತಿ ತಿಂಗಳು ಮೂರನೇ ಶನಿವಾರ ಉಪ-ವಿಭಾಗ ಮಟ್ಟದಲ್ಲಿ ಗ್ರಾಹಕರ ಕುಂದು ಕೊರತೆ ಸಭೆಗಳು ಜರುಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!