ಅತಿಕ್ರಮಿಸಿದ ಸಾರ್ವಜನಿಕ ಸ್ಥಳಗಳ ತೆರವು : ದೂರು ಸಲ್ಲಿಕೆಗೆ ಮನವಿ

BI ಬಿಜಾಪುರ : ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ಸರ್ಕಾರ ಆದೇಶದ ಅನ್ವಯ ವಿವಿಧ ಸಾರ್ವಜನಿಕ ರಸ್ತೆ, ಉದ್ಯಾನವನ, ಮಳೆನೀರು ಹರಿಯುವ ಚರಂಡಿ, ಸಾರ್ವಜನಿಕ ಖಾಲಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಉದ್ದೇಶ ಹೊಂದಲಾಗಿದ್ದು, ಇಂತಹ ಅತಿಕ್ರಮಿಸಿದ ಧಾರ್ಮಿಕ ಕಟ್ಟಡಗಳ ನಿರ್ಮಾಣದ ಕುರಿತು ಜಿಲ್ಲಾಧಿಕಾರಿಗಳ ಇ-ಮೇಲ್ ವಿಳಾಸ dcbjp.cal@gmail.com ಮತ್ತು ಶುಲ್ಕರಹಿತ ದೂರವಾಣಿ ಸಂಖ್ಯೆ 1077 ಗೆ ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈ.ಎಸ್.ಪಾಟಿಲ ಅವರು ತಿಳಿಸಿದ್ದಾರೆ.
ಮಾನ್ಯ ಸರ್ವೊಚ್ಚ ನ್ಯಾಯಾಲಯ, ನವದೆಹಲಿ 2006 ರಲ್ಲಿ ನೀಡಿರುವ ವಿಶೇಷ ಪ್ರಕರಣ ಹಾಗೂ ಕರ್ನಾಟಕ ಸರ್ಕಾರದ ಆದೇಶ ಮತ್ತು ಸುತ್ತೋಲೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ರಿಟ್ ಪೆಟಿಶನ್ 27551/2019 ರನ್ವಯ ಜಿಲ್ಲೆಯ ನಗರ /ಪಟ್ಟಣ ಮತ್ತು ಗ್ರಾಮಿಣ ಪ್ರದೇಶಗಳಲ್ಲಿ ಅತಿ ಕ್ರಮಿಸಿದ ಸಾರ್ವಜನಿಕ ರಸ್ತೆ,ಸಾರ್ವಜನಿಕ ಉದ್ಯಾನವನ, ಮಳೆ ನೀರು ಹರಿಯುವ ಚರಂಡಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳ ತೆರವಿಗೆ ನಿರ್ದೇಶನವಿದ್ದು, ಜಿಲ್ಲೆಯಲ್ಲಿ ಅತಿಕ್ರಮಿಸಿ ನಿರ್ಮಿಸಿರುವ ವಿವಿಧ ದೇವಾಲಯ, ಮಸೀದಿ, ಚರ್ಚ್, ಗುರುದ್ವಾರ, ವಿವಿಧ ಧಾರ್ಮಿಕ ಗುಂಪುಗಳಿಂದ ಅತಿ ಕ್ರಮಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ಕಾರ್ಯ ಕೈಗೊಳ್ಳಲಿದ್ದು ಈ ಕುರಿತು ದೂರುಗಳನ್ನೂ ಸಹ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮೇಲ್ಕಂಡ ಇ-ಮೇಲ್ ವಿಳಾಸ ಮತ್ತು ಉಚಿತ ದೂರವಾಣಿ ಕರೆ ಮೂಲಕ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!