ಅಂಬೇಡ್ಕರ್ ಅವರ 63ನೇ ಮಹಾ ಪರಿನಿರ್ವಾಣ ದಿನದ ನಿಮಿತ್ಯ ಶಾಲಾ ಮಕ್ಕಳೊಂದಿಗೆ ಮೇಣದ ಬತ್ತಿ ಬೆಳಗಿಸಿ, ಮೌನಾಚರಣೆ

BI ಬಿಜಾಪುರ : ನಗರದ ಕೀರ್ತಿ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂದಿನ ಬೃಹತ್ ಅಂಬೇಡ್ಕರ್ ಪ್ರತಿಮೆ ಎದುರು ಚೆ ಗುವೆರಾ ಯೂಥ್ ಫೆಡರೇಶನ್ ಸಂಘಟನೆಯ ವತಿಯಿಂದ ಸಂಜೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 63ನೇ ಮಹಾ ಪರಿನಿರ್ವಾಣ ದಿನದ ನಿಮಿತ್ಯ ಶಾಲಾ ಮಕ್ಕಳೊಂದಿಗೆ ಮೇಣದ ಬತ್ತಿ ಬೆಳಗಿಸಿ, ಮೌನಾಚರಣೆ ಮಾಡಲಾಯಿತು.
ನಂತರ ಸಂಘಟನೆಯ ಅಧ್ಯಕ್ಷ ಮಂಜುನಾಥ.ಎಸ್.ಕಟ್ಟಿಮನಿ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕೊನೆಯ ದಿನಗಳನ್ನು ಮೆಲುಕು ಹಾಕುತ್ತಾ, ದಲಿತರ ಆರಾಧ್ಯ ದೈವ ಎನಿಸಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಅವಿರತ ಶ್ರಮ ಹಾಗೂ ಹೋರಾಟಗಳಿಂದ ಮುನ್ನಡೆಸಿಕೊಂಡು ಬಂದ ಶಿಕ್ಷಣ, ಸಂಘಟನೆ, ಹೋರಾಟ, ಸ್ವಾತಂತ್ರö್ಯ, ಸಮಾನತೆ ಹಾಗೂ ಸಹೋದರತೆಗಳೆಂಬ ರಥವನ್ನು ನಾವೆಲ್ಲರೂ ಮುನ್ನಡೆಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು. ಯಾರೂ ಕೂಡ ಅದನ್ನು ಹಿಂದಕ್ಕೆ ತಳ್ಳುವಂತಹ ಕೆಲಸ ಮಾಡಬಾರದು. ಇದೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಅಂತಿಮ ಸಂದೇಶ ಹಾಗೂ ಕನಸಾಗಿತ್ತೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ಎಸ್.ಗಂಜಿ, ಅನೀಲ ತಳೇವಾಡ, ಪ್ರಕಾಶ, ಶಿವು, ಮಹೇಶ ಶ್ರೀಧರ.ಎಸ್.ಕಟ್ಟಿಮನಿ, ರಾಮು.ಎಸ್.ಕಟ್ಟಿಮನಿ, ವಿಕ್ರಮಾದಿತ್ಯ ಗಳವೆ, ಸೇರಿದಂತೆ ಇನ್ನಿತರ ಶಾಲಾ ಮಕ್ಕಳು ಇದ್ದರು.

error: Content is protected !!